ADVERTISEMENT

ರಾಯಚೂರು: ಬಂಡೆಗಳ ನಡುವೆ ಬಳಕುವ ಜಲಧಾರೆ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಗೋಲಪಲ್ಲಿ ಬಳಿಯ ಗುಂಡಲಬಂಡ ಜಲಪಾತ

ಅಮರೇಶ ನಾಯಕ
Published 5 ಅಕ್ಟೋಬರ್ 2025, 2:29 IST
Last Updated 5 ಅಕ್ಟೋಬರ್ 2025, 2:29 IST
ಹಟ್ಟಿ ಸಮೀಪದ ಗುಂಡಲಬಂಡ ಜಲಪಾತ
ಹಟ್ಟಿ ಸಮೀಪದ ಗುಂಡಲಬಂಡ ಜಲಪಾತ   

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಈ ಜಲಪಾತ ಗೋಲಪಲ್ಲಿ ಬಳಿ ಪ್ರಕೃತಿಯ ಮಡಿಲಿನಲ್ಲಿದೆ. 15 ಅಡಿ ಎತ್ತರದಿಂದ ಬೀಳುವ ರಮಣೀಯ ಜಲಧಾರೆ ಕಣ್ಮನ ಸೆಳೆಯುತ್ತದೆ.

ಗುರುಗುಂಟಾ ಗ್ರಾಮದಿಂದ 3 ಕಿ.ಮೀ‌ ದೂರವಿರುವ ಈ ಜಲಪಾತದ ಕುರಿತು ರಸ್ತೆ ಪಕ್ಕದಲ್ಲಿ ನಾಮಫಲಕ ಹಾಕಿಲ್ಲ. ಕಲ್ಲುಗಳ ಮಧ್ಯೆ ಇರುವ ಕಿರಿದಾದ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. 

ADVERTISEMENT

ಪ್ರತಿವರ್ಷ ಮಳೆಗಾಲದಲ್ಲಿ ಧುಮ್ಮಿಕ್ಕುವ ಗುಂಡಲಬಂಡ ಜಲಪಾತಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ನಾನ ಮಾಡಿ ಪಕ್ಕದಲ್ಲಿಯೇ ಇರುವ ಮಹರ್ಷಿ ವಾಲ್ಮೀಕಿ ಗುರುಕುಲಕ್ಕೆ‌‌ ಭೇಟಿ ನೀಡುತ್ತಾರೆ.

25 ದಿನಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

‘ಜಲಪಾತ ನೋಡಿ ಸಂತಸವಾಗಿದೆ. ಪ್ರಕೃತಿ ಮಡಿಲಿನ ಈ ತಾಣ ಕಣ್ಮನ ಸೆಳೆಯುತ್ತಿದೆ’ ಎಂದು ಪ್ರವಾಸಿಗ ಪುನೀತ್ ಸಂತಸ ವ್ಯಕ್ತಪಡಿಸಿದರು.

ಪ್ರಕೃತಿ ಮಡಿಲಿನ ಜಲಪಾತ ಭಕ್ತರನ್ನು ಕೈಬೀಸಿ ಕರೆಯುತ್ತಿದೆ ಎಂದು ಇಲ್ಲಿನ ಗೋಲಪಲ್ಲಿಯ ವಾಲ್ಮೀಕಿ ಮಠದ‌ ವರದಾನೇಶ್ವರ ಸ್ವಾಮೀಜಿ ತಿಳಿಸಿದರು.

ಜಲಪಾತಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಪಕ್ಕದಲ್ಲಿ ನಾಮಫಲಕ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.
– ರಾಜಾ ಸೋಮನಾಥ ನಾಯಕ, ಗುರುಗುಂಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.