ADVERTISEMENT

ಗುರ್ಜಾಪುರ ಬ್ಯಾರೇಜ್‌ನಲ್ಲಿ ಮೂರು ಗೇಟ್‌ ಓಪನ್, ಇನ್ನೂ 97 ಗೇಟ್‌ಗಳು ಬಾಕಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 12:30 IST
Last Updated 19 ಜುಲೈ 2022, 12:30 IST
ಶಕ್ತಿನಗರದ ಗುರ್ಜಾಪುರ ಬ್ಯಾರೇಜ್‌ನ ಮೂರು ಗೇಟ್‌ಗಳನ್ನು ಕ್ರೇನ್ ಮತ್ತು ಜೆಸಿಬಿ ಮೂಲಕ ಕೇರಳ ತಜ್ಞರು ತೆರೆದರು
ಶಕ್ತಿನಗರದ ಗುರ್ಜಾಪುರ ಬ್ಯಾರೇಜ್‌ನ ಮೂರು ಗೇಟ್‌ಗಳನ್ನು ಕ್ರೇನ್ ಮತ್ತು ಜೆಸಿಬಿ ಮೂಲಕ ಕೇರಳ ತಜ್ಞರು ತೆರೆದರು   

ಶಕ್ತಿನಗರ: ಗುರ್ಜಾಪುರ ಬ್ಯಾರೇಜ್‌ನಲ್ಲಿ ಮಂಗಳವಾರ ಕೇರಳ ತಜ್ಞರ ತಂಡದಿಂದ ಮೂರು ಗೇಟ್‌ಗಳನ್ನು ಮಾತ್ರ ತೆರೆಯಲು ಸಾಧ್ಯವಾಯಿತು.

ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕೃಷ್ಣಾ ಒಳ ಹರಿವಿನಲ್ಲಿ ಗಣನೀಯವಾಗಿ ಕುಸಿತ ಉಂಟಾಗಿ ನದಿಗೆ ಬಿಡುವ ನೀರಿನ ಪ್ರಮಾಣವೂ ಕಡಿತಗೊಳಿಸಲಾಗಿದೆ. ಬೆಳಗಿನಿಂದ ನೀರಿನ ಹೊರ ಹರಿವಿನ ಪ್ರಮಾಣವನ್ನೂ ಸಹ ಕಡಿಮೆ ಮಾಡಲಾಗಿದೆ. ಇದರಿಂದ ನದಿಯಲ್ಲಿ ನೀರು ಹರಿಯುವ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.

ಐದು ದಿನಗಳಿಂದ ಗುರ್ಜಾಪೂರು ಬ್ಯಾರೇಜ್ ಗೇಟ್ ತೆರೆಯುವ ಹರಸಾಹಸ ಮಂಗಳವಾರ ಸಹ ಮುಂದುವರೆದಿದ್ದು, ಪ್ರವಾಹದಲ್ಲಿ ಭಾರಿ ಕಡಿಮೆ ಆಗಿದ್ದರಿಂದ ಗೇಟ್ ತೆರೆಯುವ ಪ್ರಕ್ರಿಯೆಗೆ ಒಂದಷ್ಟು ಹೆಚ್ಚಿನ ಅವಕಾಶಗಳು ದೊರೆತಂತಾಗಿದೆ. ಒಟ್ಟು 194 ಗೇಟ್ ಹೊಂದಿದ ಗುರ್ಜಾಪೂರು ಬ್ಯಾರೇಜ್‌ನಲ್ಲಿ 94 ಗೇಟ್‌ಗಳು ತೆರೆಯಲಾಗಿತ್ತು. ಅದರಲ್ಲಿ 100 ಗೇಟ್‌ಗಳು ತೆರೆಯುವ ಬಾಕಿ ಇತ್ತು. ಇದರಲ್ಲಿ ಕೇವಲ 3 ಗೇಟ್‌ಗಳನ್ನು ಮಾತ್ರ ತೆರೆಯಲಾಗಿದೆ. ಸಂಜೆ 4 ಗಂಟೆಯವರೆಗೆ ದೊರೆತ ಮಾಹಿತಿ ಇದಾಗಿದೆ.

ADVERTISEMENT

ಇನ್ನೂಳಿದ 97 ಗೇಟ್‌ಗಳನ್ನು ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ತೆರೆಯಲಾಗುವುದು. ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿದ್ದರಿಂದ ಆರ್‌ಟಿಪಿಎಸ್ ಅಧಿಕಾರಿಗಳು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.