ADVERTISEMENT

ಹಟ್ಟಿ ಚಿನ್ನದ ಗಣಿ ಅದಿರು‌ ಕುಸಿತ; ಕಾರ್ಮಿಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:39 IST
Last Updated 9 ಸೆಪ್ಟೆಂಬರ್ 2025, 7:39 IST
ಹಟ್ಟಿ ಚಿನ್ನದ ಗಣಿಯಲ್ಲಿ ಸಡಿಲ ಅದಿರು ಬಿದ್ದ ಸ್ಥಳಕ್ಕೆ ಕಾರ್ಮಿಕ ಮುಖಂಡರು ಭೇಟಿ ನೀಡಿ ಪರಿಶೀಲನೆ ಮಾಡಿದರು
ಹಟ್ಟಿ ಚಿನ್ನದ ಗಣಿಯಲ್ಲಿ ಸಡಿಲ ಅದಿರು ಬಿದ್ದ ಸ್ಥಳಕ್ಕೆ ಕಾರ್ಮಿಕ ಮುಖಂಡರು ಭೇಟಿ ನೀಡಿ ಪರಿಶೀಲನೆ ಮಾಡಿದರು   

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿಯ ಸೆಂಟ್ರಲ್ ಶಾಫ್ಟ್ 19ನೇ ಲೆವೆಲ್‌ನಲ್ಲಿ ಗಣಿ ಕಾರ್ಮಿಕ ಹುಲಗಪ್ಪ ಅದಿರು ಗಟ್ಟಿಯಾಗಿದ ಬಗ್ಗೆ ಪರಿಶೀಲನೆ ಮಾಡುವಾಗ ಆಕಸ್ಮಿಕವಾಗಿ ಅದಿರು ಕುಸಿದಿದೆ.

ಗಾಯಗೊಂಡಿದ್ದ ಕಾರ್ಮಿಕನ ಕಾಲು ಮುರಿದಿದ್ದು ಹೆಚ್ಚಿನ‌ ಬೆಳಗಾವಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸ್ಥಳಕ್ಕೆ ಕಾರ್ಮಿಕ ಸಂಘದ ಚುನಾಯಿತ ಮುಖಂಡರು ಭೇಟಿ ನೀಡಿ ಪರಿಶೀಲಿಸಿ ಸುರಕ್ಷಾ ಅಧಿಕಾರಿಗಳ ಜೊತೆ ಮಾಹಿತಿ ಪಡೆದರು.

ADVERTISEMENT

‘ಮುಂದಿನ ದಿನಗಳಲ್ಲಿ ಇಂಥ ಅವಘಡ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಸಂಘದ ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಾಪುರ, ಜಮದಗ್ನಿ ಕೋಠಾ, ರಮೇಶ ಬಾಬು, ಸೆಕ್ಷನ್ ಪೋರ್‌ಮನ್ ಹಾಗೂ ಸಹ ಕಾರ್ಮಿಕರು ಜತೆಯಲ್ಲಿ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.