ADVERTISEMENT

ಹಟ್ಟಿ ಚಿನ್ನದ ಗಣಿ: ಜನರ ನೆಮ್ಮದಿ ಕಸಿದ ಘನ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:52 IST
Last Updated 2 ಡಿಸೆಂಬರ್ 2025, 7:52 IST
ಹಟ್ಟಿ ಪಟ್ಟಣದ ರಾಮ್‌ರಹೀಂ ಕಾಲೊನಿ ಪಕ್ಕದಲ್ಲಿ ಗಣಿ ಕಂಪನಿಯ ತ್ಯಾಜ್ಯಕ್ಕೆ ಬೆಂಕಿ ಹಂಚಿದ ಪರಿಣಾಮ ಕಾಲೊನಿಯಲ್ಲಿ ನಿತ್ಯ ಹೋಗೆ ಹಾವರಿಸಿಕೊಳ್ಳುತ್ತಿದೆ
ಹಟ್ಟಿ ಪಟ್ಟಣದ ರಾಮ್‌ರಹೀಂ ಕಾಲೊನಿ ಪಕ್ಕದಲ್ಲಿ ಗಣಿ ಕಂಪನಿಯ ತ್ಯಾಜ್ಯಕ್ಕೆ ಬೆಂಕಿ ಹಂಚಿದ ಪರಿಣಾಮ ಕಾಲೊನಿಯಲ್ಲಿ ನಿತ್ಯ ಹೋಗೆ ಹಾವರಿಸಿಕೊಳ್ಳುತ್ತಿದೆ   

ಹಟ್ಟಿ ಚಿನ್ನದ ಗಣಿ: ಇಲ್ಲಿನ ಕಂಪನಿಯ ಘನತ್ಯಾಜ್ಯ ನಿತ್ಯ ಸುಡುವುದರಿಂದ ಸುಟ್ಟ ಹೊಗೆಯಿಂದ ಪಕ್ಕದಲ್ಲಿ ಇರುವ ರಾಮ್‌ರಹೀಂ ಕಾಲೊನಿ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ.

ಹಟ್ಟಿ ಕಂಪನಿಯ ಕ್ಯಾಂಪ್ ಪ್ರದೇಶದಲ್ಲಿ ಕಾಲೊನಿಗಳ ಘನ ತ್ಯಾಜ್ಯವನ್ನು ರಾಮ್ ರಹೀಂ ಕಾಲೊನಿ ಹತ್ತಿರ ತಂದು ಹಾಕಲಾಗುತ್ತಿದೆ‌. ಒಣ ಹಾಗೂ ಹಸಿ ಕಸ, ಪ್ಲಾಸ್ಟಿಕ್, ಆಸ್ಪತ್ರೆಗೆ ಬಳಸಿದ ತ್ಯಾಜ್ಯ ಇದೇ ಸ್ಧಳದಲ್ಲಿ ಹಾಕಿ ನಿತ್ಯ ಬೆಂಕಿ ಹಚ್ಚಿ ಸುಡುತ್ತಿದ್ದು, ಸುಟ್ಟ ಹೊಗೆ ನಿವಾಸಿಗಳಿಗೆ ನೆಮ್ಮದಿ ಕಸಿದುಕೊಂಡಿದ್ದು, ಜನರಿಗೆ‌ ರೋಗ ಹರಡುವ ಭೀತಿ ಎದುರಾಗಿದೆ ಎನ್ನುತ್ತಾರೆ ನಿವಾಸಿಗಳು.

ಘನತ್ಯಾಜ್ಯ ಸಂಗ್ರಹಿಸಿ ನಿರ್ವಹಣೆ ಮಾಡಬೇಕಿದ್ದ ಗಣಿ ಕಂಪನಿ ಅಧಿಕಾರಿಗಳ ಬೇಜಬ್ದಾರಿಯಿಂದ ಸಂಜೆ ಸಮಯದಲ್ಲಿ ಹಾಗೂ ರಾತ್ರಿ ವೇಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ಹಗಲು ರಾತ್ರಿ ಬೆಂಕಿ ಸುಡುವುದರಿಂದ ಹೋಗೆ ಆವರಿಸುತ್ತಿದೆ ಎಂದು ಕಾಲೊನಿ ನಿವಾಸಿ‌ ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲೊನಿ ನಿವಾಸಿಗಳ ಆರೋಗ್ಯ ಸ್ಧಿತಿ ಗಂಭೀರವಾಗಿದೆ. ಪಕ್ಕದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಗಳು ಇದ್ದು, ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಹರಡಿ ಆಸ್ಪತ್ರೆ ಸೇರಿದ ಉದಾಹರಣೆಯೂ ಇದೆ. ಗಣಿ ಕಂಪನಿಯ ಅಧಿಕಾರಿಗಳು ವಾಯು ಮಾಲಿನ್ಯಕ್ಕೆ ಕ್ರಮ ಕೈಗೊಳ್ಳದಿದ್ದರೆ ಗಣಿ ಕಂಪನಿ ಮುಂದೆ ಹೋರಾಟ ಮಾಡಲಾಗುವುದು ಎಂದು ಕಾಲೊನಿ ನಿವಾಸಿಗಳು ಹೇಳುತ್ತಾರೆ.

ಕರೆ ಸ್ವೀಕರಿಸಿದ ಗಣಿ ಅಧಿಕಾರಿಗಳು:

ಹೊಗೆ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ವರದಿಗಾರ ದೂರವಾಣಿ ಮೂಲಕ ಕರೆ ಮಾಡಿದರೂ ಗಣಿ ಕಂಪನಿ ಅಧಿಕಾರಿಗಳು ರೆ ಕರೆ ಸ್ವೀಕರಿಸಿಲ್ಲ. ಕೆಲವರು ಮೊಬೈಲ್‌ ನಂಬರ್‌ಗೆ ನಾಟ್ ರೀಚಬಲ್ ಆಗಿದ್ದವು.

Quote - ಹಟ್ಟಿ ಕಂಪನಿಯ ಘನ ತ್ಯಾಜ್ಯ ಸುಡುವುದರಿಂದ ಹೋಗೆ ಹಾವರಿಸಿ ಕಾಲೋನಿ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಗಣಿ ಕಂಪನಿ ಆಡಳಿತ ಮಂಡಳಿ ಇಲ್ಲಿನ ಜನರ ಸಮಸ್ಯೆ ಬಗೆಹರಿಸಬೇಕಿದೆ ನಿಂಗಪ್ಪ ಗ್ರಾಪಂ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.