ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಕೃಷ್ಣಾ ತೀರದ ನಡುಗಡ್ಡೆ ಕರಕಲಗಡ್ಡಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮಂಗಳವಾರ ತೆರಳಿ ಅನಾರೋಗ್ಯದಿಂದ ಬಳಲುತ್ತಿದ್ದ 11 ವರ್ಷ ವಯಸ್ಸಿನ ಬಾಲಕಿಯ ಆರೋಗ್ಯ ತಪಾಸಣೆ ಮಾಡಿದರು.
‘ಕೃಷ್ಣಾ ನದಿಯಲ್ಲಿ ನೀರು ಹರಿವಿನ ವೇಗ ಹೆಚ್ಚಿದೆ. ಆರೋಗ್ಯ ನಿರೀಕ್ಷಣಾ ಅಧಿಕಾರಿ ಅಲಿ ಚಾವೂಸ್ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ಪ್ರತಾಪ ಮಡ್ಡಿಕಾರ ತೆಪ್ಪದಲ್ಲಿ ಕರಕಲಗಡ್ಡಿಗೆ ತೆರಳಿದರು. 2–3 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ ಅನಿತಾಳ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಿದರು.
ಇತರೆ 6 ಜನರ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಔಷಧ ಹಾಗೂ ಪಡಿತರವನ್ನು ತಾಲ್ಲೂಕು ಆಡಳಿತದಿಂದ ವಿತರಿಸಲಾಯಿತು. ‘ನಡುಗಡ್ಡೆಯಲ್ಲಿ ಜ್ವರದಿಂದ ಬಳಲುತ್ತಿರುವ ಬಾಲಕಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಜುಲೈ 7ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.