ADVERTISEMENT

ಮಸ್ಕಿಯಲ್ಲಿ ಹೈಟೆಕ್ ಶೌಚಾಲಯ

20 ವರ್ಷಕ್ಕೆ ಒಡಂಬಡಿಕೆ ಮಾಡಿಕೊಂಡಿರುವ ಮಾರುತಿ ಸೋಷಿಯಲ್ ಸರ್ವಿಸ್ ಸಂಸ್ಥೆ

ಪ್ರಕಾಶ ಮಸ್ಕಿ
Published 9 ಸೆಪ್ಟೆಂಬರ್ 2023, 6:16 IST
Last Updated 9 ಸೆಪ್ಟೆಂಬರ್ 2023, 6:16 IST
ಮಸ್ಕಿಯ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯ
ಮಸ್ಕಿಯ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯ   

ಮಸ್ಕಿ: ಪುರಸಭೆಯು ಸಿಂಧನೂರಿನ ಮಾರುತಿ ಸೋಷಿಯಲ್ ಸರ್ವಿಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಹೈಟೆಕ್ ಶೌಚಾಲಯ ನಿರ್ಮಿಸಿದೆ.

ಸುಮಾರು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಸಂಕೀರ್ಣದಲ್ಲಿ 8 ಪುರುಷ ಹಾಗೂ 2 ಮಹಿಳಾ ಶೌಚಾಲಯಗಳಿವೆ. 2 ಸ್ನಾನ ಗೃಹಗಳನ್ನು ನಿರ್ಮಿಸಲಾಗಿದೆ.

ನೀರಿಗಾಗಿ ಕೊಳವೆಬಾವಿ ಹಾಕಿಸಲಾಗಿದೆ. ದಿನದ 24 ಗಂಟೆಯೂ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇದೆ ಹಾಗೂ ಅದರ ಸ್ವಚ್ಛತೆಗಾಗಿ ಒಬ್ಬ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ADVERTISEMENT

20 ವರ್ಷಕ್ಕೆ ಒಡಂಬಡಿಕೆ ಮಾಡಿಕೊಂಡಿರುವ ಸಿಂಧನೂರಿನ ಮಾರುತಿ ಸೋಷಿಯಲ್ ಸರ್ವಿಸ್ ಸಂಸ್ಥೆಯ ಮುಖ್ಯಸ್ಥ ದುರಗಪ್ಪ ಸುಕಾಲಪೇಟೆ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಯಿಂದ ಹಣ ಹೂಡಿಕೆ ಮಾಡಿ ಹೈಟೆಕ್ ಶೌಚಾಲಯ ನಿರ್ಮಿಸಿದ್ದಾರೆ.

ಸಾರ್ವಜನಿಕರಿಂದ ಬರುವ ಹಣವನ್ನು ನಿರ್ವಹಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥ ದುರಗಪ್ಪ ಸುಕಾಲಪೇಟೆ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

ಪುರಸಭೆಯ ಹಳೆ ಶೌಚಾಲಯ ಸರಿಯಾಗಿ ನಿರ್ವಹಣೆಯಾಗದ ಕಾರಣ ಸಾರ್ವಜನಿಕರು ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದರು. ಇದೀಗ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಿದ್ದಾರೆ. ಮುಖ್ಯಾಧಿಕಾರಿ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಶೌಚಾಲಯ ಇಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಮಹಿಳಾ ಪ್ರಯಾಣಿಕರ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿತ್ತು. ಈಗ ಹಳೆ ಬಸ್ ನಿಲ್ದಾಣದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣವಾಗಿರುವುದರಿಂದ ಮಹಿಳೆಯರು ಸೇರಿ ಸಾರ್ವಜನಿಕರಿಗೆ ಅನುಕೂಲವಾಗಿದೆ.

ದುರಗಪ್ಪ ಸುಕಾಲಪೇಟೆ

₹10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾರುತಿ ಸೋಷಿಯಲ್ ಸರ್ವಿಸ್ ಸಂಸ್ಥೆಯ ಸಹಭಾಗಿತ್ವ ಮೂಲ ಸೌಕರ್ಯ ವ್ಯವಸ್ಥೆ

ಸಾರ್ವಜನಿಕ ಸ್ಥಳಗಳಲ್ಲಿ ಹೈಟೆಕ್ ಶೌಚಾಲಯದ ಬೇಡಿಕೆ ಬಂದರೆ ನಮ್ಮ ಸಂಸ್ಥೆಯಿಂದ ನಿರ್ಮಿಸಿಕೊಡಲಾಗುವುದು. ಶೌಚಾಲಯ ಬಳಕೆಯಿಂದ ಬಂದ ಹಣದಲ್ಲಿಯೇ ಅದರ ನಿರ್ವಹಣೆ ಮಾಡಲಾಗುವು
ದುರಗಪ್ಪ ಸುಕಾಲಪೇಟೆ ಮುಖ್ಯಸ್ಥ ಮಾರುತಿ ಸೋಷಿಯಲ್ ಸರ್ವಿಸ್ ಸಂಸ್ಥೆ ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.