ADVERTISEMENT

ಟಣಮಕಲ್ಲು: ಹೀರೆಹಳ್ಳ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:14 IST
Last Updated 21 ಆಗಸ್ಟ್ 2025, 7:14 IST
ಹಟ್ಟಿ ಸಮೀಪದ ಟಣಮಕಲ್ಲು ಗ್ರಾಮದ ಹೀರೆಹಳ್ಳ ಸೇತುವೆ ಮುಳುಗಡೆಯಾಗಿದೆ
ಹಟ್ಟಿ ಸಮೀಪದ ಟಣಮಕಲ್ಲು ಗ್ರಾಮದ ಹೀರೆಹಳ್ಳ ಸೇತುವೆ ಮುಳುಗಡೆಯಾಗಿದೆ   

ಹಟ್ಟಿ ಚಿನ್ನದ ಗಣಿ: ಕೃಷ್ಣ ನದಿಗೆ ಅಪಾರ ಪ್ರಮಾಣದ ನೀರು ಹರಿ ಬಿಟ್ಟಿದ್ದರಿಂದ ಟಣಮಕಲ್ಲು ಗ್ರಾಮದ ಹಿರೇಹಳ್ಳದ ಸೇತುವೆ ಮುಳುಗಡೆಯಾಗಿದೆ.

ರಸ್ತೆ ಸಂರ್ಪೂಣ ಬಂದ್ ಆಗಿದ್ದು ಗ್ರಾಮಸ್ಥರು ಪರದಾಡಿದರು.

‘ನಮ್ಮ ಸಮಸ್ಯೆ ಬಗೆಹರಿಸಿ ಎಂದು ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದರು ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಸೋಮಣ್ಣ ದೂರಿದರು.

ADVERTISEMENT

‘ಮಳೆ ಬಂದರೆ ಸೇತುವೆ ಮೇಲೆ ನೀರು ಹರಿಯುತ್ತದೆ. ಟಣಮಕಲ್ಲು ಗ್ರಾಮದಿಂದ ಗುರುಗುಂಟಾಕ್ಕೆ ಹಿರೇಹಳ್ಳದ ಮೂಲಕ ತೆರಳಬೇಕು. ಸೇತುವೆ ಎತ್ತರಿಸಿದರೆ ಅನುಕೂಲವಾಗುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೇತುವೆ ನಿರ್ಮಿಸಬೇಕು’ ಎಂದು ಗ್ರಾಮಸ್ಧರ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.