ADVERTISEMENT

ರಾಯಚೂರು: ಕಾಶಿ ಯಾತ್ರೆಗೆ ಹೋಗಿ ಮರಳಿದವರಿಗೆ ‘ಹೋಮ್ ಕ್ವಾರಂಟೈನ್’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 13:31 IST
Last Updated 25 ಮಾರ್ಚ್ 2020, 13:31 IST
 ಹೋಮ್ ಕ್ವಾರಂಟೈನ್ ಇರಬೇಕು ಎಂದು ಕೈ ಮೇಲೆ ಸೀಲ್ ಹಾಕಲಾಗಿರುವವರು ವಾಸಿಸುವ ಮನೆ ಗೋಡೆ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಭಿತ್ತಿಪತ್ರ ಅಂಟಿಸಿದರು
ಹೋಮ್ ಕ್ವಾರಂಟೈನ್ ಇರಬೇಕು ಎಂದು ಕೈ ಮೇಲೆ ಸೀಲ್ ಹಾಕಲಾಗಿರುವವರು ವಾಸಿಸುವ ಮನೆ ಗೋಡೆ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಭಿತ್ತಿಪತ್ರ ಅಂಟಿಸಿದರು   

ರಾಯಚೂರು: ತಾಲ್ಲೂಕಿನ ಸಗಮಕುಂಟಾ ಗ್ರಾಮದಿಂದ ಕಾಶಿ ಯಾತ್ರೆಗಾಗಿ ತೆರಳಿ, ಬುಧವಾರ ಮರಳಿದ 16 ಜನರನ್ನು 'ಹೋಮ್ ಕ್ವಾರಂಟೈನ್' ಮಾಡಲಾಗಿದೆ.

ಆರೋಗ್ಯ ಇಲಾಖೆಯ ನಿಯೋಜಿತ ಸಿಬ್ಬಂದಿಯು ಎಲ್ಲರ ಆರೋಗ್ಯ ತಪಾಸಣೆ ನಡೆಸಿದರು. ಕೈ ಮಣಿಕಟ್ಟಿನ ಮೇಲೆ ಸೀಲ್ ಹಾಕಿದ್ದು, ಮುಂದೆ ಸೂಚನೆ ಕೊಡುವವರೆಗೂ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಬರದಂತೆ ತಿಳಿಸಿದ್ದಾರೆ.

ಗೋಡೆಗೆ ಭಿತ್ತಿಪತ್ರ: ಹೋಮ್ ಕ್ವಾರಂಟೈನ್ ಇರಬೇಕು ಎಂದು ಕೈ ಮೇಲೆ ಸೀಲ್ ಹಾಕಲಾಗಿರುವವರು ವಾಸಿಸುವ ಮನೆ ಗೋಡೆ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಭಿತ್ತಿಪತ್ರ ಅಂಟಿಸಿದರು.

ADVERTISEMENT

ಜಿಲ್ಲೆಯಲ್ಲಿ ಇದುವರೆಗೂ 148 ಜನರು ವಿದೇಶಗಳಿಂದ ಮರಳಿದ್ದು, 625 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.