ADVERTISEMENT

ಗ್ರಾಮಗಳ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ: ಶಾಸಕ ಮಾನಪ್ಪ ಡಿ. ವಜ್ಜಲ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 12:47 IST
Last Updated 12 ಜನವರಿ 2025, 12:47 IST
ಪೈದೊಡ್ಡಿ ಗ್ರಾಪಂ ವ್ಯಾಪ್ತಿಯ ಗೊಲಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಡಿಗೆ ಕಟ್ಟಡ ಕಾಮಗಾರಿಗೆ ಶಾಸಕ ಮಾನಪ್ಪ ಡಿ ವಜ್ಜಲ್ ಭೂಮಿ ಪೂಜೆ ನೆರವೇರಿಸಿದರು.
ಪೈದೊಡ್ಡಿ ಗ್ರಾಪಂ ವ್ಯಾಪ್ತಿಯ ಗೊಲಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಡಿಗೆ ಕಟ್ಟಡ ಕಾಮಗಾರಿಗೆ ಶಾಸಕ ಮಾನಪ್ಪ ಡಿ ವಜ್ಜಲ್ ಭೂಮಿ ಪೂಜೆ ನೆರವೇರಿಸಿದರು.   

ಹಟ್ಟಿ ಚಿನ್ನದಗಣಿ : ಗ್ರಾಮೀಣ ಭಾಗದ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಮಾನಪ್ಪ ಡಿ. ವಜ್ಜಲ್ ಹೇಳಿದರು.

ಹಟ್ಟಿ ಪಟ್ಟಣದ ಸಮೀಪದ ಪೈದೊಡ್ಡಿ ಗ್ರಾಪಂ ವ್ಯಾಪ್ತಿಗೆ ಬರುವ ಗದ್ದಿಗಿ ತಾಂಡ ಗ್ರಾಮದಲ್ಲಿ 24-25 ನೇ ಸಾಲೀನ ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ $50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಗೋಲಪಲ್ಲಿ ಬಳಿ ಚಕ್ ಡ್ಯಾಮ್ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ನೀರಾವರಿ ಯೋಜನೆ ಸದುಪಯೋಗ ಆಗುವಂತೆ ಯೋಜನೆ ತಯಾರಿಸಲಾಗಿದೆ. ಅಲ್ಲದೇ ಟಣಮಕ್ಕಲು, ರಾಯದುರ್ಗಾ ಗ್ರಾಮದ ರಸ್ತೆಗೆ ಡಾಂಬರಿಕರಣ ಮಾಡಲು ಅನುಧಾನ ಬಿಡುಗಡೆಯಾಗಿದೆ ಆದಷ್ಟು ಬೇಗನೆ ಚಾಲನೆ ನೀಡಲಾಗುವುದು, ಸಮಗ್ರ ಅಬಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣಕ್ಕೆ ಆದ್ಯತೆ ನೀಡಿ ಈ ಭಾಗದ ಅಭಿವೃದ್ದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಗುಂತಗೋಳ ಸಂಸ್ಧಾನದ ರಾಜ ಶ್ರೀನಿವಾಸ ನಾಯಕ ಮಾತನಾಡಿದರು.

ಮುಖಂಡರಾದ ,ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಹುಲ್ಲೆಶ ಸಾಹುಕಾರ್, ಗಂಜೇಂದ್ರ ನಾಯಕ, ಪರಮೇಶ ಯಾವದ, ನಂದಿಶ ನಾಯಕ, ಎನ್ ಸ್ವಾಮೀ, ಗ್ರಾಮಸ್ಧರಾದ ಅಮರಪ್ಪ, ಸೋಮನಾಥ, ಆದನಗೌಡ ದಳಪತಿ, ಕಷ್ಟಪ್ಪ, ಸೋಮಣ್ಣ ನಾಯಕ, ಶಶಿ ಬಡಿಗೇರ್, ರಮೇಶ ಉಳಿಮೇಶ್ವರ, ಯಂಕೋಬ ಪವಾಡೆ, ಶಿವ ಪ್ರಸಾದ್, ಸಾರ್ವಜನಿಕ ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.