
ಸರ್ಜಾಪುರ (ಶಕ್ತಿನಗರ): ‘ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರ್ಜಾಪೂರ ಗ್ರಾಮದಲ್ಲಿ 16 ನೂತನ ಸ್ವ ಸಹಾಯ ಸಂಘಗಳ ಉದ್ಘಾಟನೆ ಸಮಾರಂಭ ಮತ್ತು ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳ ಕ್ಷೇತದ್ರ ಧರ್ಮಾಧಿಕಾರಿ ಹಾಗೂ ಯೋಜನೆಯ ಅಧ್ಯಕ್ಷ ವೀರೇಂದ್ರ ಹೆಗ್ಗಡೆ ಅವರ ಕನಸಿನ ಕೂಸು ಈ ಯೋಜನೆ ಆಗಿದೆ. ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ, ಶಿಷ್ಯ ವೇತನ, ಕೃಷಿ , ಹೈನುಗಾರಿಕಾ ಅಂತಹ ಯೋಜನೆಗಳು ಜಾರಿಯಲ್ಲಿವೆ. ಪ್ರಗತಿ ನಿಧಿ ಸದ್ಬಳಕೆಯಿಂದ ಕುಟುಂಬ ಅಭಿವೃದ್ಧಿ, ಸ್ವ ಉದ್ಯೋಗಗಳ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕು ಈ ನಿಟ್ಟಿನಲ್ಲಿ ಯೋಜನೆ ಕೆಲಸ ಮಾಡುತ್ತಿದ್ದು, ನೂತನ ಸ್ವ ಸಹಾಯ ಸಂಘಗಳ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆತ್ಕೂರು ಗ್ರಾಮದಲ್ಲಿ 10 ಜನ (ಅಂಗವಿಕಲರು) ಅಂಗವಿಕಲರಿಗೆ ಧರ್ಮಸ್ಥಳ ಯೋಜನೆಯ ವತಿಯಿಂದ 3 ವ್ಹೀಲ್ ಚೇರ್, 4 ಸಿಂಗಲ್ ವೇಗ್ ವಾಕಿಂಗ್ ಸ್ಟಿಕ್ ಮತ್ತು 3 ಲೇಗ್ ವಾಕಿಂಗ್ ಸ್ಟಿಕ್‌ಗಳನ್ನು ವಿತರಿಸಿದರು.
ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ರಘುಪತಿ ಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ತ್ರಿವೇಣಿ, ಮೇಲ್ವಿಚಾರಕ ಅಡಿವೆಯ್ಯ ಮಾಲಗಿತ್ತಿಮಠ, ಸೇವಾ ಪ್ರತಿನಿಧಿ ನರೇಶ, ಈರೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.