ರಾಯಚೂರು: ‘ಮಹಿಳೆಯರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇನ್ನರ್ ವೀಲ್ ಸಹಕಾರಿ’ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾ ಅಧ್ಯಕ್ಷೆ ಸುಷ್ಮಾ ಪತಂಗೆ ಹೇಳಿದರು.
ಇಲ್ಲಿಯ ಎಸ್‌ಎಲ್‌ವಿ ಹೋಟೆಲ್‌ನ ಕೊಠಾರಿ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಸಂಪನ್ಮೂಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಿಳೆಯರು ಕೆಲಸವನ್ನೆಲ್ಲ ನಿರ್ವಹಿಸಿ ಸಂತೋಷ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಇನ್ನರ್ ವೀಲ್ ಕ್ಲಬ್ ನೆರವಾಗಿದೆ’ ಎಂದರು.
ಸ್ತ್ರೀ ಸಶಸ್ತಿಕರಣ ಕಾರ್ಯಕ್ರಮ ಅಡಿಯಲ್ಲಿ ಬಡ ಮಹಿಳೆಯರಿಗೆ 25 ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.
ರಾಯಚೂರಿನ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಲಲಿತಾ ಸತ್ಯ ಕುಮಾರ, ಕಾರ್ಯದರ್ಶಿ ಅನಿತಾ ವೆಂಕಟೇ, *ಬ್ರಮರಾಂಬ ವಿಶ್ವನಾಥ, ಖಜಾಂಚಿ ರತ್ನಮಾಲಾ ರಮೇಶ, ಶ್ರೀದೇವಿ, ಮಾಜಿ ಜಿಲ್ಲಾ ಅಧ್ಯಕ್ಷೆ ಇಂದಿರಾ ಕಲ್ಯಾಣಕರ್ ಉಪಸ್ಥಿತರಿದ್ದರು.
ಪ್ರತಿಭಾ ಗೋನಾಳ ಸ್ವಾಗತ ಗೀತೆ ಹಾಗೂ ಪ್ರಮದ ನಾಗರಾಜ್ ಪ್ರಾರ್ಥನೆ ಹಾಡಿದರು.
ಲತಾ ಪಾಟೀಲ ಹಾಗೂ ಪೂಜಾ ಪಾಟೀಲ ನಿರೂಪಿಸಿದರು. ಅನಿತಾ ವೆಂಕಟೇಶ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.