ADVERTISEMENT

ಅವಾಚ್ಯ ಶಬ್ದಗಳಿಂದ ನಿಂದನೆ; ಚಾಮರಸ ಮಾಲಿಪಾಟೀಲ ಬಹಿರಂಗ ಕ್ಷಮೆ ಕೋರಲಿ

​ಪ್ರಜಾವಾಣಿ ವಾರ್ತೆ
Published 23 ಮೇ 2025, 15:50 IST
Last Updated 23 ಮೇ 2025, 15:50 IST
ಎಸ್. ನರಸಿಂಹಲು
ಎಸ್. ನರಸಿಂಹಲು    

ರಾಯಚೂರು: 'ರೈತ ಹೋರಾಟಗಾರ ಚಾಮರಸ ಮಾಲಿಪಾಟೀಲ ಅವರು ಪ್ರತಿಭಟನೆ ಮಾಡುವ ವೇಳೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಶಾವಂತಗೇರಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದು ಖಂಡನೀಯ' ಎಂದು ಡಿಎಸ್‌ಎಸ್ ಜಿಲ್ಲಾ ಘಟಕದ ಸಂಚಾಲಕ ಎಸ್.‌ ನರಸಿಂಹಲು ಆಕ್ರೋಶ ವ್ಯಕ್ತಪಡಿಸಿದರು.

'ಜೋಳ ಖರೀದಿ ಕೇಂದ್ರವನ್ನು ಏಕಾಏಕಿ ಬಂದ್ ಮಾಡಿರುವುದನ್ನು ಖಂಡಿಸಿ ಹಾಗೂ ನೋಂದಣಿ ಮಾಡಿಕೊಂಡಿರುವ ರೈತರ ಜೋಳವನ್ನು ಖರೀದಿಸುವಂತೆ ನಡೆದ ಹೋರಾಟದಲ್ಲಿ ರೈತರ ಮನವಿ ಪತ್ರವನ್ನು ಸ್ವೀಕರಿಸಲು ಜಿಲ್ಲಾಡಳಿತ ಪರ ಬಂದ ಕೃಷ್ಣ ಶಾವಂತಗೇರಾ ಅವರನ್ನು ರೈತ ಹೋರಾಟಗಾರ ಚಾಮರಸ ಮಾಲಿಪಾಟೀಲ ಅವರನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿರುವುದುಖಂಡನೀಯ ' ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಆಗ್ರಹಿಸಿದರು.

'ಜೋಳ ಖರೀದಿಗೆ ಸಂಬಂಧಿಸಿದಂತೆ ಸಿಂಧನೂರಲ್ಲಿ ರೈತರು ಹೋರಾಟ ನಡೆಸಿದ್ದರು. ಆದರೆ ತಹಶೀಲ್ದಾರ್ ಮನವಿ ಪತ್ರ ಸ್ವೀಕರಿಸಿದರು. ಅಲ್ಲಿ ರೈತರ ಹಾಗೂ ತಹಶೀಲ್ದಾರ್ ನಡುವೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚಾಮರಸ ಮಾಲಿಪಾಟೀಲ ಅವರು ಒಬ್ಬ ಹಿರಿಯ ರೈತ ಹೋರಾಟಗಾರರಾಗಿ ಅಧಿಕಾರಿಗಳ ಮೇಲೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿರುವುದು ತಮ್ಮ ಹೋರಾಟಕ್ಕೆ ಶೋಭೆ ತರುವಂತದಲ್ಲ' ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ವಕೀಲ ಶಿವರಾಜ ಮ್ಯಾಗಳಮನಿ, ಹೇಮರಾಜ ಅಸ್ಕಿಹಾಳ, ಎಚ್. ಎಂ. ಬಾಬು, ಹನುಮೇಶ ಆರೋಲಿ, ನರಸಿಂಹಲು ಮರ್ಚಟಹಾಳ್, ರಘು ಯಾದವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.