ADVERTISEMENT

ಜಕ್ಕೆರಮಡು: ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 13:20 IST
Last Updated 26 ಮೇ 2025, 13:20 IST
ಮುದಗಲ್ ಸಮೀಪದ ಜಕ್ಕೆರಮಡು-ಸುಲ್ತಾನಪುರ ರಸ್ತೆ ಕಾಮಗಾರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸನಗೌಡ ಆರ್.ತುರ್ವಿಹಾಳ ಚಾಲನೆ ನೀಡಿದರು
ಮುದಗಲ್ ಸಮೀಪದ ಜಕ್ಕೆರಮಡು-ಸುಲ್ತಾನಪುರ ರಸ್ತೆ ಕಾಮಗಾರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಬಸನಗೌಡ ಆರ್.ತುರ್ವಿಹಾಳ ಚಾಲನೆ ನೀಡಿದರು   

ಮುದಗಲ್: ಸಮೀಪದ ಜಕ್ಕೆರಮಡು-ಸುಲ್ತಾನಪುರ ರಸ್ತೆ ಕಾಮಗಾರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ಆರ್.ತುರ್ವಿಹಾಳ ಚಾಲನೆ ನೀಡಿದರು.

‘2024-25ನೇ ಸಾಲಿನ ಪಿಎಂಜಿಎಸ್‌ವೈ ಯೋಜನೆಯ ₹3 ಕೋಟಿ ಮೊತ್ತದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಡಾಂಬರೀಕರಣ ಮಾಡಲಾಗುವುದು. ಗುಣಮಟ್ಟದ ಕಾಮಗಾರಿ ಮಾಡಬೇಕು’ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ನಾಗಲಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಶರಣಬಸವ ವ್ಯಾಕರನಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲರಡ್ಡೆಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಗದ್ದೆಪ್ಪ, ಅಮರೇಶ, ಹನುಮಂತ, ಮುಖಂಡರಾದ ಮೌನೇಶ, ಆನಂದ ರಾಥೋಡ, ಗುರುರಾಜ, ಮೈಲಾರಪ್ಪ, ಮಲ್ಲಪ್ಪ, ಸೋರನಗೌಡ, ರವಿಕುಮಾರ, ಗ್ಯಾನಪ್ಪ, ಶರಣಪ್ಪ, ಪರಶುರಾಮ ಹಾಗೂ ಹನುಮಂತ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.