
ಜಾಲಹಳ್ಳಿ: ಪಟ್ಟಣ ಹೊರವಲಯದ ಕಲ್ಮಲಾ-ತಿಂಥಣಿ ಬ್ರಿಜ್ ಹೆದ್ದಾರಿ ಪಕ್ಕದಲ್ಲಿ ಎಸೆಯಲಾಗಿದ್ದ ತ್ಯಾಜ್ಯವನ್ನು ಗ್ರಾಮ ಪಂಚಾಯಿತಿಯವರು ವಿಲೇವಾರಿ ಮಾಡಿದರು.
ಈ ಕುರಿತು ‘ಪ್ರಜಾವಾಣಿಯ’ ಅಕ್ಟೋಬರ್ 31ರ ಸಂಚಿಕೆಯಲ್ಲಿ ‘ಆಗದ ಕಸ ವಿಲೇವಾರಿ: ಜನತೆಗೆ ತೊಂದರೆ’ ಶೀರ್ಷಿಕೆ ಅಡಿ ವರದಿ ಪ್ರಕಟವಾಗಿತ್ತು.
ವರದಿಯಿಂದ ಎಚ್ಚೆತ್ತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಶನಿವಾರ ಬೆಳಿಗ್ಗೆಯೇ ರಸ್ತೆ ಪಕ್ಕದಲ್ಲಿ ಎಸೆದ ತ್ಯಾಜ್ಯವನ್ನು ಜೆಸಿಬಿ ಯಂತ್ರದ ಸಹಾಯದಿಂದ ಟ್ರ್ಯಾಕ್ಟರ್‌ಗೆ ತುಂಬಿ ಬೇರೆ ಕಡೆ ಸಾಗಿಸಿತು.
ಪಿಡಿಒ ನರಸಪ್ಪ ಮಾತನಾಡಿ,‘ಅಂಗಡಿ, ಹೋಟೆಲ್, ಖಾನಾವಳಿಗಳ ಮಾಲೀಕರಿಗೆ ನೋಟಿಸ್ ನೀಡಲಾ ಗುವುದು. ಕಸ ಎಸೆಯದೇ ವಿಲೇವಾರಿ ವಾಹನಕ್ಕೆ ನೀಡಬೇಕು. ಒಂದು ವೇಳೆ ಕಸ ಎಸೆದರೆ ದಂಡ ವಿಧಿಸ ಲಾಗುವುದು’ ಎಂದರು.
ಗ್ರಾ.ಪಂ ಲೆಕ್ಕಧಿಕಾರಿ ಅಯ್ಯಪ್ಪ, ಯಂಕೋಬ ನಾಯಕ ತೋಟದ್, ಗ್ರಾ.ಪಂ ಉಪಾಧ್ಯಕ್ಷ ಈರಪ್ಪ ನಾಯಕ, ಸದಸ್ಯರಾದ ಶಿವಪ್ಪ ನಾಯಕ ಗಾಂಜಿ, ಮಕ್ತೂಮ್ ಬಾಷಾ ಪಾರಸಿ, ಅಬ್ದುಲ್ ರಹಿಮಾನ್ ಖರೇಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.