ADVERTISEMENT

ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ: ನೆರಳಿನ ವ್ಯವಸ್ಥೆ ಇಲ್ಲದೆ ಜಾನುವಾರುಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 16:16 IST
Last Updated 26 ಏಪ್ರಿಲ್ 2024, 16:16 IST
ಜಾಲಹಳ್ಳಿಯಲ್ಲಿ ಜಾನುವಾರು ಜಾತ್ರೆ ನಡೆಯುತ್ತಿರುವುದು
ಜಾಲಹಳ್ಳಿಯಲ್ಲಿ ಜಾನುವಾರು ಜಾತ್ರೆ ನಡೆಯುತ್ತಿರುವುದು   

ಜಾಲಹಳ್ಳಿ: ಪಟ್ಟಣದಲ್ಲಿ ಲಕ್ಷ್ಮಿ ರಂಗನಾಥ ಸ್ವಾಮಿ ಜಾತ್ರೆ ಅಂಗವಾಗಿ ನಡೆಯುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳ ಖರೀದಿ ಮತ್ತು ಮಾರಾಟ ಭರ್ಜರಿಯಾಗಿದೆ. ಆದರೆ, ನೆರಳಿನ ವ್ಯವಸ್ಥೆ ಇಲ್ಲದ ಕಾರಣ ಜಾನುವಾರುಗಳು ಹಾಗೂ ರೈತರು ಸಂಕ ಷ್ಟ ಎದುರಿಸುತ್ತಿದ್ದಾರೆ.

ಶುಕ್ರವಾರ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಖಲಾದ ಕಾರಣ ಜಾನುವಾರುಗಳಿಗೆ ತೊಂದರೆ ಉಂಟಾಯಿತು.

ತೀವ್ರ ಬರಗಾಲ ಆವರಿಸಿದ್ದರೂ ಎತ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ರೈತರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಕೆಲವು ರೈತರು ಎತ್ತುಗಳನ್ನು ಬದಲಿಸುತ್ತಿರುವುದು ಕಂಡುಬರುತ್ತಿದೆ.

ADVERTISEMENT

ಜಾತ್ರೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜಾನುವಾರುಗಳು ಕಂಡು ಬರದಿದ್ದರೂ ಒಂದು ಜೊತೆ ಎತ್ತು ಅಂದಾಜು ₹1 ಲಕ್ಷದಿಂದ ₹1.80 ಲಕ್ಷದವರೆಗೆ ಮಾರಾಟವಾಗುತ್ತಿವೆ.

ನಿಜವಾದ ರೈತರಿಗೆ ಎತ್ತುಗಳು ಬೇಕು. ಗ್ರಾಮೀಣ ಪ್ರದೇಶದಲ್ಲಿ‌ ಮನೆ ಮುಂದೆ ಎರಡು ಎತ್ತುಗಳು ಇರಲೇಬೇಕು. ಇಲ್ಲವಾದರೆ ಒಕ್ಕಲುತನದ ಮನೆ ಎಂದು ಗುರುತಿಸುವುದಾದರೂ ಹೇಗೆ ಎಂದು ರೈತರು ಪ್ರಶ್ನಿಸುತ್ತಾರೆ.

ಮುಂಗಾರು ಉತ್ತಮ ರೀತಿಯಲ್ಲಿ ಸುರಿಯುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗೆ ಎತ್ತುಗಳು ಬೇಕೇ ಬೇಕು ಎಂದು ನಾರಾಯಣ ತಾಂಡಾದ ರೈತ ಯಮನಪ್ಪ ₹1.20 ಲಕ್ಷ ನೀಡಿ ಎರಡು ಎತ್ತು ಖರೀದಿಸಿದರು.

ತಾಲ್ಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಇದೆ. ಆದ್ದರಿಂದ ನೀರಾವರಿ ಸೌಲಭ್ಯ ಇದೆ. ಕೃಷಿ ಚಟುವಟಿಕೆ ಮಾಡಲು ವರ್ಷಪೂರ್ತಿ ಎತ್ತುಗಳು ಬೇಕು. ಈ ವರ್ಷ ಸಹ ಮಳೆ ಕೈ ಕೊಟ್ಟರೆ ರೈತರಿಗೆ ತೊಂದರೆಯಾಗಲಿದೆ ಎಂದು ರೈತ ಸಿದ್ದಪ್ಪ ತಿಳಿಸಿದರು.

ಪ್ರತಿ ವರ್ಷ ಜಾತ್ರೆಯಲ್ಲಿ 15 ದಿ ಮಾರಾಟ ನಡೆಯುತ್ತಿತ್ತು. ಅದರೆ, ಈ ವರ್ಷ ಕೇವಲ 5 ದಿನ ನಡೆಯುವ ಸಾಧ್ಯತೆ ಇದೆ.

ಖರೀದಿ ಹಾಗೂ ಮಾರಾಟಕ್ಕೆ ಬಂದಿರುವ ರೈತರಿಗೆ ರಂಗನಾಥ ಸ್ವಾಮಿ ಸೇವಾ ಸಮಿತಿ ನೇತೃತ್ವದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ.

ರೈತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.