ಜಾಲಹಳ್ಳಿ: ಸಮೀಪದ ಮುಂಡರಗಿ ಗ್ರಾಮದಲ್ಲಿ ಹೊಲಕ್ಕೆ ನೀರು ಹರಿದ ವಿಚಾರಕ್ಕೆ ಸಹೋದರರ ನಡುವೆ ಸೋಮವಾರ ಜಗಳ ನಡೆದಿದೆ.
ಮುಂಡರಗಿ ಗ್ರಾಮದ ಬಾಷುಮಿಯಾ ಸೋಮವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿ ಹಾಗೂ ಭತ್ತಕ್ಕೆ ಕಾಲುವೆ ನೀರು ಹರಿಸಿದ್ದಾರೆ. ಈ ವೇಳೆ ಹೆಚ್ಚುವರಿ ನೀರು ಪಕ್ಕದಲ್ಲಿದ್ದ ಅವರ ಸಹೋದರ ಅಬ್ದುಲ್ ಸಾಬ್ ಅವರ ಜಮೀನಿಗೆ ನುಗ್ಗಿದೆ. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ.
ಮನೆಗೆ ಹೋದ ಬಳಿಕ ರಾತ್ರಿ ಮತ್ತೆ ಜಗಳವಾಗಿದೆ. ಅಕ್ಕಪಕ್ಕದವರು ಬಿಡಿಸಿದ್ದಾರೆ.
‘ರಾತ್ರಿ ಏಕಾಏಕಿ ಬಾಷುಮಿಯಾ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಬೆಳಿಗ್ಗೆ ಮೃತಪಟ್ಟಿದ್ದಾರೆ. ಬಾಷುಮಿಯಾ ಅವರ ಎದೆಗೆ ಗುದ್ದಿದ ಕಾರಣ ನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ’ ಎಂದು ಮೃತನ ಹೆಂಡತಿ ಮಕ್ತೂಂಬಿ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.