ADVERTISEMENT

ರಾಯಚೂರು: ಪರಶುರಾಮ ಪತ್ನಿ ನಿವಾಸಕ್ಕೆ ಜೆಡಿಎಸ್‌ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 16:03 IST
Last Updated 5 ಆಗಸ್ಟ್ 2024, 16:03 IST
ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ಯಾದಗಿರಿಯ ಮೃತ ಪಿಎಸ್ಐ ಪರಶುರಾಮ ಅವರ ಪತ್ನಿಯ ನಿವಾಸಕ್ಕೆ ಜೆಡಿಎಸ್ ಜಿಲ್ಲಾ ಘಟಕದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು
ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ಯಾದಗಿರಿಯ ಮೃತ ಪಿಎಸ್ಐ ಪರಶುರಾಮ ಅವರ ಪತ್ನಿಯ ನಿವಾಸಕ್ಕೆ ಜೆಡಿಎಸ್ ಜಿಲ್ಲಾ ಘಟಕದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು   

ರಾಯಚೂರು: ನಗರದ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ಯಾದಗಿರಿಯ ಮೃತ ಪಿಎಸ್ಐ ಪರಶುರಾಮ ಅವರ ಪತ್ನಿಯ ನಿವಾಸಕ್ಕೆ ಜೆಡಿಎಸ್ ಜಿಲ್ಲಾ ಘಟಕದ ನಿಯೋಗ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿತು.

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪರಶುರಾಮ ಪತ್ನಿ ಶ್ವೇತಾ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ‘ನಾವು ನಿಮ್ಮ ಕುಟುಂಬದ ಜತೆಗೆ ಇದ್ದೇವೆ. ಧೈರ್ಯ ಕಳೆದುಕೊಳ್ಳಬಾರದು. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ’ ಎಂದು ಭರವಸೆ ನೀಡಿದರು.

‘ನಿಮ್ಮ ಪುತ್ರನ ವಿದ್ಯಾಭ್ಯಾಸ ಸರ್ಕಾರಿಂದ ವ್ಯವಸ್ಥೆ ಮಾಡಲು, ನಿಮಗೂ ಸರ್ಕಾರಿ ನೌಕರಿ ಕೊಡುವಂತೆ ಒತ್ತಾಯಿಸುವೆ’ ಎಂದು ಹೇಳಿದರು.

ADVERTISEMENT

ಜಿಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾತನಾಡಿ, ‘ಪಿಎಸ್ಐ ಪರಶುರಾಮ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ’ ಎಂದು ಆರೋಪಿಸಿದರು.

ಪಕ್ಷದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎನ್. ಶಿವಶಂಕರ ಮಾತನಾಡಿದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ಪರಿಶಿಷ್ಟ ಪಂಗಡ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ, ದೇವದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಗ್ರಾಮಾಂತರ ಅಧ್ಯಕ್ಷ ನಾಗರಾಜ, ಜಿಲ್ಲಾ ಪರಿಶಿಷ್ಟ ಪಂಗಡ ಅಧ್ಯಕ್ಷ ಹಂಪಯ್ಯ ನಾಯಕ, ಮುಖಂಡರಾದ ಪಿ.ರಾಜು, ನರಸಪ್ಪ ಆಶಾಪೂರ, ಪರಶುರಾಮ, ವೆಂಕಟಸ್ವಾಮಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.