ADVERTISEMENT

ಗೆಲುವಿಗೆ ಸಂಘಟನಾತ್ಮಕ ಪ್ರಯತ್ನ ಅಗತ್ಯ: ವೆಂಕಟಪ್ಪ ನಾಯಕ

ಜಿ.ಪಂ., ತಾ.ಪಂ. ಚುನಾವಣೆಯ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 14:27 IST
Last Updated 14 ಆಗಸ್ಟ್ 2021, 14:27 IST
ರಾಯಚೂರಿನ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಶನಿವಾರ ಏರ್ಪಡಿಸಿದ್ದ ಪಂಚಾಯಿತಿ ಚುನಾವಣೆಗೆ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ವೆಂಕಟಪ್ಪ ನಾಯಕ ಮಾತನಾಡಿದರು
ರಾಯಚೂರಿನ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಜೆಡಿಎಸ್‌ನಿಂದ ಶನಿವಾರ ಏರ್ಪಡಿಸಿದ್ದ ಪಂಚಾಯಿತಿ ಚುನಾವಣೆಗೆ ಪೂರ್ವಭಾವಿ ಸಭೆಯಲ್ಲಿ‌ ಶಾಸಕ ವೆಂಕಟಪ್ಪ ನಾಯಕ ಮಾತನಾಡಿದರು   

ರಾಯಚೂರು: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂ‌ಚಾಯಿತಿ ಚುನಾವಣೆ ತಯಾರಿ ನಡೆದಿದ್ದು ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳ ಗೆಲುವಿಗೆ ಸಂಘಟಿತವಾಗಿ ಕೆಲಸ ಮಾಡಿ ಅಭ್ಯರ್ಥಿಗಳಿಗೆ ನೈತಿಕ‌ ಬಲ‌ ನೀಡಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಗರದ ಅತ್ತನೂರು ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಜೆಡಿಎಸ್‌ನಿಂದಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ‌ ಮಾತನಾಡಿದರು.

ಜೆಡಿಎಸ್ ಈಗಲೂ ಶಕ್ತಶಾಲಿ ಪಕ್ಷವಾಗಿದೆ. ರಾಜ್ಯ ಮತ್ತು‌ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, 70 ವರ್ಷ ಆಡಳಿತ ಮಾಡಿದ ಪಕ್ಷದೊಂದಿಗೆ ಸಮಾನ ಸ್ಥಾನದಲ್ಲಿದೆ. ಹೀಗಾಗಿ ಜಿಲ್ಲೆಯ ಜನ ಜೆಡಿಎಸ್ ಪಕ್ಷದ ಜೊತೆಗಿದ್ದು ಮುಂಬರುವ ಜಿಲ್ಲಾ ಪಂ‌ಚಾಯಿತಿ, ತಾಲ್ಲೂಕು ಪಂ‌ಚಾಯಿತಿ ಚುನಾವಣೆಯಲ್ಲಿ‌ ಹೆಚ್ಚಿನ‌ ಸ್ಥಾನ‌ ಗೆಲ್ಲಲು ‌ಪ್ರಾಮಾಣಿಕ‌ ಪ್ರಯತ್ನ ಮಾಡಬೇಕು ಎಂದರು.

ADVERTISEMENT

ದೇವದುರ್ಗ‌ದ ಜೆಡಿಎಸ್ ನಾಯಕಿ ಕರೆಮ್ಮ‌ ನಾಯಕ‌ ಮಾತನಾಡಿ, ಪಂಚಾಯಿತಿ‌ ಚುನಾವಣೆ ಮುಂದಿನ‌ ವಿಧಾನಸಭೆ‌ ಚುನಾವಣೆಯ ದಿಕ್ಸೂಚಿಯಾಗಲಿದೆ. ಬಿಜೆಪಿಯ ಆಡಳಿತದಿಂದ ಜನರು ರೋಸಿ‌ಹೋಗಿದ್ದಾರೆ. ರೈತರ ಸಮಸ್ಯೆಗೆ ಎರಡು ಪಕ್ಷಗಳು ‌ಅನ್ಯಾಯ ಮಾಡಿವೆ. ಜೆಡಿಎಸ್ ಪಕ್ಷ ಬಲಪಡಿಸಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಿ, ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಗ್ರಾಮಾಂತರ ಯುವ ಮುಖಂಡ ರವಿ ಪಾಟೀಲ ಮಾತನಾಡಿದರು.

ಮುಖಂಡರಾದ ಯುಸೂಫ‌ಖಾನ್, ಸಿದ್ದು ವೈ. ಬಂಡಿ, ನಗರಾಧ್ಯಕ್ಷ ಬಿ. ತಿಮ್ಮಾರೆಡ್ಡಿ, ಲಕ್ಷ್ಮಿಪತಿ ಗಾಣಧಾಳ‌, ಪಿ.ಯ‌ಲ್ಲಪ್ಪ,‌ ಪವನ್ ಕುಮಾರ, ದಾನಪ್ಪ‌ಯಾದವ್, ಬುಡ್ಡನಗೌಡ, ಮಲ್ಲಿಕಾರ್ಜುನ ಪಾಟೀಲ,‌ಜಾಫರ್ ಅಲಿ ಪಾಟೀಲ,‌ ನಿಜಾಮುದ್ದೀನ್‌, ಜಂಬುನಾಥ‌ ಯಾದವ್, ಖಲೀಲ‌ ಖುರೇಷಿ, ಶೇಖರ‌ಗೌಡ‌ ತಿಮ್ಮಾಪುರ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.