ಕವಿತಾಳ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಪಟ್ಟಣದ ವಿವಿಧೆಡೆ ಮಂಗಳವಾರ ಧ್ವಜಾರೋಹಣ ನೆರವೇರಿಸಲಾಯಿತು ಮತ್ತು ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್ ಮತ್ತು ವಿಶ್ವಕರ್ಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಅಧ್ಯಕ್ಷೆ ಕಾಸೀಂಬೀ ಚಾಂದ್ ಪಾಶಾ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷೆ ಎಲಿಜಾ ಒವಣ್ಣ, ಸದಸ್ಯರಾದ ಲಿಂಗರಾಜ ಕಂದಗಲ್, ಯಲ್ಲಪ್ಪ ಮಾಡಗಿರಿ, ರುಕ್ಮುದ್ದೀನ್, ಲಾಳೇಶ ನಾಯಕ, ಮುಖಂಡರಾದ ಯಮನಪ್ಪ ದಿನ್ನಿ, ತಿಪ್ಪಯ್ಯಸ್ವಾಮಿ, ಶರಣಬಸವ ಹಣಿಗಿ, ಅಯ್ಯಪ್ಪ ನಿಲಗಲ್, ಹುಚ್ಚಪ್ಪ ವಡವಟ್ಟಿ, ಈರಣ್ಣ ಕೆಳಗೇರಿ, ಯಾಕೂಬ, ಮೌನೇಶ ಕೊಡ್ಲಿ ಉಪಸ್ಥಿತರಿದ್ದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗ, ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಪೊಲೀಸ್ ಠಾಣೆ, ಅಂಬೇಡ್ಕರ್ ನಗರದ ಸರ್ಕಾರಿ ಶಾಲೆ, ಉರ್ದು ಶಾಲೆ, ಸಮೀಪದ ವಟಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧೆಡೆ ಧ್ವಜಾರೋಹಣ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.