ADVERTISEMENT

ಕವಿತಾಳ | ಕಾಮಗಾರಿ ನಡೆಯುವಾಗಲೇ ಕಿತ್ತು ಬರುತ್ತಿರುವ ಡಾಂಬರ್: ಸ್ಥಳೀಯರ ಆಕ್ರೋಶ

ಮಂಜುನಾಥ ಎನ್ ಬಳ್ಳಾರಿ
Published 20 ಅಕ್ಟೋಬರ್ 2025, 5:47 IST
Last Updated 20 ಅಕ್ಟೋಬರ್ 2025, 5:47 IST
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ಡಾಂಬರ್‌ ಕಿತ್ತಿರುವುದುನ್ನು ತೋರಿಸಿದ ಸ್ಥಳೀಯ ವ್ಯಕ್ತಿ 
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ಡಾಂಬರ್‌ ಕಿತ್ತಿರುವುದುನ್ನು ತೋರಿಸಿದ ಸ್ಥಳೀಯ ವ್ಯಕ್ತಿ    

ಕವಿತಾಳ: ಸಮೀಪದ ಆನ್ವರಿ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ಕಡ್ಡೋಣಿ ಕ್ರಾಸ್‌ವರೆಗೆ ನಡೆದ ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘‌ಅಂದಾಜು ₹1 ಕೋಟಿ ವೆಚ್ಚದಲ್ಲಿ ಕೈಗೊಂಡ ರಸ್ತೆ ದುರಸ್ತಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ವಹಿಸಿಕೊಂಡ ಭೂಸೇನಾ ನಿಗಮದ ಅಧಿಕಾರಿಗಳು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಮಣ್ಣಿನ ಮೇಲೆ ಡಾಂಬರ್‌ ಹಾಕಿದ್ದು ಕೈ ಯಿಂದ ತೆಗೆದರೂ ಕಿತ್ತು ಬರುತ್ತಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ನೆಲ ಅಗೆಯದೇ ಕಂಕರ್‌ ಮತ್ತು ಮರಂ ಹರಡಿ ಅದರ ಮೇಲೆ ಡಾಂಬರ್‌ ಹಾಕಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಹಿಂದೆ ಡಾಂಬರ್‌ ಕಿತ್ತು ಬರುತ್ತಿದೆ, ಹಳ್ಳದ ನೀರು ಹರಿಯಲು ಐದು ಕಡೆ ಸಣ್ಣ ಸೇತುವೆಗಳಿದ್ದು ಅವುಗಳನ್ನು ತೆಗೆದು ಹೊಸದಾಗಿ ನಿರ್ಮಿಸಿಲ್ಲ, ಹೀಗಾಗಿ ಸರಾಗವಾಗಿ ನೀರು ಸಾಗಲು ತೊಂದರೆಯಾಗುತ್ತಿದೆ. ಕಳಪೆ ಕಾಮಗಾರಿಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕಾಮಗಾರಿ ಮಾಡುತ್ತಿದ್ದಾರೆ’ ಎಂದು ಗ್ರಾಮದ ಬಸವರಾಜ ಉಪ್ಪಾರ, ಶಿವಪ್ಪ ಪೂಜಾರಿ, ಮಲ್ಲಯ್ಯ ಉದ್ಭಾಳ, ಶಿವಗೇನಿ, ಶಿವಪ್ಪ ಹಾಲಾಪುರ, ಹನುಮಂತ ನಾಯಕ, ಆದಪ್ಪ ಮತ್ತಿತರರು ಆರೋಪಿಸಿದರು.

ADVERTISEMENT
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು
ಕವಿತಾಳ ಸಮೀಪದ ಕಡ್ಡೋಣಿ ಕ್ರಾಸ್ ರಸ್ತೆ ದುರಸ್ತಿ ಕಾಮಗಾರಿ ಕಳಪೆಯಾಗಿರುವುದು.
ದಶಕಗಳಿಂದ ಹದಗೆಟ್ಟ ರಸ್ತೆಯಲ್ಲಿಯೇ ಓಡಾಡುತ್ತಿದ್ದೇವೆ. ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾದರೆ ಮತ್ತೆ ಸಂಕಷ್ಟ ಎದುರಿಸುವಂತಾಗುತ್ತದೆ 
ಗುರುಪಾದಪ್ಪ ದಳಪತಿ ಕಡ್ಡೋಣಿ ಗ್ರಾಮಸ್ಥ 
ಅಂದಾಜು ಪಟ್ಟಿಯಂತೆ ಕಾಮಗಾರಿ ನಿರ್ವಹಿಸಲಾಗಿದೆ ಈ ಬಗ್ಗೆ ಸೂಕ್ತ ದಾಖಲೆಗಳಿವೆ. ಸ್ಥಳೀಯರ ಆರೋಪದಲ್ಲಿ ಹುರುಳಿಲ್ಲ 
ಹನುಮಂತಪ್ಪ ಎಇಇ ರಾಯಚೂರು ಭೂಸೇನಾ ನಿಗಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.