ಕವಿತಾಳ: ಇಲ್ಲಿಗೆ ಸಮೀಪದ ಬಾಗಲವಾಡ ಗ್ರಾಮದಲ್ಲಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಗುರುವಾರ ಅಗ್ನಿಅವಘಡ ಸಂಭವಿಸಿದ್ದು, ಹುಲ್ಲು ಭಸ್ಮವಾಗಿದೆ.
ಸೈದಾಪುರ ಗ್ರಾಮದ ರೈತ ಸಣ್ಣಮಲ್ಲಯ್ಯ ಅವರು ಬಾಗಲವಾಡ ಗ್ರಾಮದ ಜಮೀನಿನಲ್ಲಿ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್‌ಗೆ ತುಂಬಿಕೊಂಡು ಬರುತ್ತಿದ್ದಾಗ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿತು. ಅದನ್ನು ಗಮನಿಸಿದ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿದ. ಸುತ್ತಲಿನ ಜನ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ವ್ಯಾಪಿಸಿದ ಬೆಂಕಿಯಲ್ಲಿ ಟ್ರಾಲಿ ಸುಟ್ಟಿದ್ದು, ಸಂಪೂರ್ಣ ಹುಲ್ಲು ಭಸ್ಮವಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.