ADVERTISEMENT

‘ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಕಾನೂನು ರೂಪಿಸಲಿ’

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:47 IST
Last Updated 26 ಡಿಸೆಂಬರ್ 2025, 5:47 IST
ದೇವದುರ್ಗ ಪಟ್ಟಣದಲ್ಲಿ ಮರ್ಯಾದೆ ಹತ್ಯೆ ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು
ದೇವದುರ್ಗ ಪಟ್ಟಣದಲ್ಲಿ ಮರ್ಯಾದೆ ಹತ್ಯೆ ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು   

ದೇವದುರ್ಗ: ‘ಸಂವಿಧಾನ ಬದ್ಧ ಅಂತರ್ಜಾತಿ ವಿವಾಹವಾಗುವ ಯುವ ಸಮುದಾಯಕ್ಕೆ ರಕ್ಷಣೆ ನೀಡುವ ಕಾನೂನು ರೂಪಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಹೇಳಿದರು.

ಪಟ್ಟಣದ ವಿುನಿ ವಿಧಾನಸೌಧ ಎದುರುಗಡೆ ಹುಬ್ಬಳ್ಳಿಯ ಇನಾಂ ವೀರಾಪುರನಲ್ಲಿ ನಡೆದ ಮರ್ಯಾದೆ ಹತ್ಯೆ ಖಂಡಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು ಅವರ ಮಂತ್ರ ಮಾಂಗಲ್ಯಗಳನ್ನು ಅನುಸರಿಸಿ ಸರಳವಾಗಿ ಅಂತರ್ಜಾತಿ ವಿವಾಹವಾಗಿ ಸಮಾಜಕ್ಕೆ ಒಂದೆಡೆ ಮಾದರಿ ಆದರೆ ಮತ್ತೊಂದೆಡೆ ಹತ್ಯೆ ಭಯದಲ್ಲಿ ಇರುವ ನವ ವಿವಾಹಿತರಿಗೆ ಸರ್ಕಾರ ವಿಶೇಷ ಕಾನೂನು ರೂಪಿಸಿ ರಕ್ಷಣೆ ಮತ್ತು ಉಲ್ಲಂಘಿಸಿದ ಕುಟುಂಬಕ್ಕೆ ಕಠಿಣ ಶಿಕ್ಷೆ ನೀಡುವ ಕಾಯ್ದೆ ರೂಪಿಸಬೇಕು’ ಎಂದರು.

ADVERTISEMENT

ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ, ಎಂಆರ್‌ಎಸ್‌ಎಚ್ ತಾಲ್ಲೂಕು ಅಧ್ಯಕ್ಷ ಲಿಂಗಪ್ಪ ಗೌಡೂರು, ಅಲೆಮಾರಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ ರುದ್ರಾಕ್ಷಿ, ಕೂಲಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಯಲ್ಲಪ್ಪ ಆಲದರ್ತಿ, ಅಬ್ರಹಾಂ, ವೆಂಕಟೇಶ, ಶಿವರಾಜ, ಹನುಮಂತ, ಸಂಗಪ್ಪ, ಬುರಪ್ಪ, ಕ್ರಾಂತಿಕುಮಾರ, ಮೋಹನ, ಹೊನ್ನಪ್ಪ, ಲಕ್ಷ್ಮಣ, ವಿಜಯ ಕುಮಾರ, ಮೌನೇಶ, ಮಹಾದೇವ, ಚಂದ್ರು ನಾಯಕ, ಹನುಮಂತ್ರಾಯ ದೊರೆ, ಗುಂಡಪ್ಪ ನಾಯಕ, ಚನ್ನಬಸವ ಮತ್ತು ಜಯರಾಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.