ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ತುಂತುರು ಮಳೆ ಶುರುವಾಗಿದೆ.
ಚಂಡಮಾರುತದ ಪರಿಣಾಮ ಗುರುವಾರದಿಂದ ತಂಪು ಹವಾಮಾನ ಆವರಿಸಿದೆ. ಬಿಸಿಲುನಾಡು ಎರಡು ದಿನಗಳಿಂದ ಮಲೆನಾಡಾಗಿ ಬದಲಾಗಿದೆ. ಎಲ್ಲೆಡೆಯೂ ಭತ್ತ ಮತ್ತು ಹತ್ತಿ ಕೊಯ್ಲು ಆರಂಭವಾಗಿತ್ತು. ಆದರೆ ಮಳೆಯಿಂದಾಗಿ ರೈತರಿಗೆ ತೊಂದರೆ ಆಗಿದೆ. ಎಂದಿನಂತೆ ಹತ್ತಿ, ಭತ್ತ ಮಾರುಕಟ್ಟೆಯಲ್ಲಿ ವಹಿವಾಟು ನಡೆಯುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.