ಲಿಂಗಸುಗೂರು: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಆ್ಯಪ್‌ನಲ್ಲಿ ಹಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಸಮೀಕ್ಷೆದಾರರು ತಾಪತ್ರಯ ಅನುಭವಿಸುವಂತಾಗಿದೆ.
ಮನೆ ಸಂಖ್ಯೆಗಳಿಗೆ ಅನುಗುಣವಾಗಿ ಸಮೀಕ್ಷೆದಾರರಿಗೆ ಇಂತಿಷ್ಟು ಮನೆಗಳನ್ನು ನಿಗದಿ ಪಡಿಸಿ ಮನೆಗಳಿಗೆ ಈ ಹಿಂದೆ ಮೀಟರ್ ರೀಡರ್ ಅಂಟಿಸಿರುವ ಸಿಕ್ಟರ್‌ನಲ್ಲಿ ಸಂಖ್ಯೆಗಳನ್ನು ನೀಡಿ ಸಮೀಕ್ಷೆಗೆ ನಿಯೋಜನೆ ಮಾಡಲಾಗಿದೆ.
ನ್ಯಾವಿಗೇಷನ್ ಸರಿಯಾಗಿ ತೋರಿಸದ ಕಾರಣ ಸಮೀಕ್ಷೆದಾರರಿಗೆ ತಮಗೆ ನೀಡಿದ ಮನೆಗಳನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಮನೆ ಸಿಕ್ಕ ಮೇಲೆ ಆ್ಯಪ್‌ನಲ್ಲಿ ಕೇಳಿರುವ ಪ್ರಶ್ನೆಗಳಿಗೆ ವಿವರ ನಮೂದಿಸುತ್ತಿರುವಾಗ ಟೈಮ್ ಔಟ್, ಸರ್ವರ್ ಡೌನ್ ಹೀಗೇ ಅನೇಕ ತಾಂತ್ರಿಕ ತೊಂದರೆಗಳ ನಡುವೆ ಸಮೀಕ್ಷೆ ನಡೆಸುವಂತಾಗಿದೆ ಎಂದು ಹೆಸರೇಳಲು ಇಚ್ಛಿಸದ ಸಮೀಕ್ಷೆದಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.