ADVERTISEMENT

ಲಿಂಗಸುಗೂರು: ಹಿಂದೂ ಯುವಕನಿಂದ ಇಫ್ತಾರ್‌ ಕೂಟ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 12:32 IST
Last Updated 23 ಮಾರ್ಚ್ 2025, 12:32 IST
ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ರಂಜಾನ ಹಬ್ಬದ ಅಂಗವಾಗಿ ಹಿಂದೂ ಯುವಕ ಗಂಗಾಧರ ಮುಸ್ಲಿಂ ಯುವಕರಿಗಾಗಿ ಇಫ್ತಾರ್ ಕೂಟ ಆಯೋಜನೆ ಮಾಡಿರುವುದು.
ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ರಂಜಾನ ಹಬ್ಬದ ಅಂಗವಾಗಿ ಹಿಂದೂ ಯುವಕ ಗಂಗಾಧರ ಮುಸ್ಲಿಂ ಯುವಕರಿಗಾಗಿ ಇಫ್ತಾರ್ ಕೂಟ ಆಯೋಜನೆ ಮಾಡಿರುವುದು.   

ಲಿಂಗಸುಗೂರು: ರಂಜಾನ್ ಹಬ್ಬದ ಅಂಗವಾಗಿ ಉಪವಾಸ ವೃತದ ಹಿನ್ನಲೆಯಲ್ಲಿ ತಾಲ್ಲೂಕಿನ ಈಚನಾಳ ಗ್ರಾಮದ ಹಿಂದೂ ಯುವಕ ತಮ್ಮ ಮನೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಾರೆ.‌

ತಾಲ್ಲೂಕಿನ ಈಚನಾಳ ಗ್ರಾಮದ ಗಂಗಾಧರ ಬಡಿಗೇರ ಅವರು, ತಮ್ಮ ಮನೆಯಲ್ಲಿ ರಂಜಾನ್ ಉಪವಾಸ ವ್ರತ ಆಚರಣೆಯಲ್ಲಿರುವ ಮುಸ್ಲಿಂ ಸಮುದಾಯದವರಿಗೆ ಶನಿವಾರ ಸಂಜೆ ಹುಗ್ಗಿ,ಅನ್ನ,ಸಾಂಬಾರ ಸೇರಿ ಇತರೆ ಆಹಾರ ತಯಾರಿಸಿ ಉಣ ಬಡಿಸಿದರು. ಬಡಿಗ ವೃತ್ತಿ ಮಾಡುವ ಗಂಗಾಧರ ಕಳೆದ ಮೂರು ವರ್ಷದಿಂದ ತಮ್ಮ ಮನೆಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡುತ್ತಿದ್ದಾರೆ. ಇದಲ್ಲದೆ ಕಳೆದ 8-10 ವರ್ಷಗಳಿಂದ ಮೋಹರಂ ಸಂದರ್ಭದಲ್ಲಿ ಅಲಾಯಿ ದೇವರಗಳನ್ನು ಹೊತ್ತು ಮೆರವಣಿಗೆ ನಡೆಸುತ್ತಾರೆ. ಪ್ರತಿ ಗುರುವಾರ ಅಲಾಯಿ ದೇವರ ವಸ್ತುಗಳಿಗೆ ಪೂಜೆ ನೆರವೇರಿಸುವ ಭಾವೈಕ್ಯತೆ ಮೆರೆಯುತ್ತಿದ್ದಾರೆ.

ಮಸ್ತಾನ್ ಅಲಿ, ಮುಕ್ತುಂ ಸಾಬ,ಬಂದಿಗೆ ಸಾಬ, ಮುಲ್ಲಾ, ಬಂದೆ ನವಾಜ ಮುಲ್ಲಾ, ಮುಕ್ತುಂ ಸಾಬ ಮೌಜಾನ, ಗೌಸ್ ಪೀರ,ಹನುಮಂತ ಗುಜ್ಜಲ, ಗಜದಂಡೆಪ್ಪ ಮೇಟಿ, ಭೀಮಣ್ಣ ಸುಣಕಲ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.