ADVERTISEMENT

ಲಿಂಗಸುಗೂರು: ವಚನ ಕಟ್ಟಿನ ಅಡ್ದಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:00 IST
Last Updated 27 ಅಕ್ಟೋಬರ್ 2025, 5:00 IST
ಲಿಂಗಸುಗೂರಿನಲ್ಲಿ ವಚನ ಗ್ರಂಥಗಳ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು
ಲಿಂಗಸುಗೂರಿನಲ್ಲಿ ವಚನ ಗ್ರಂಥಗಳ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು   

ಲಿಂಗಸುಗೂರು: ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 114ನೇ ಸಂಸ್ಮರಣೋತ್ಸವ, ಶರಣ ಸಂಸ್ಕೃತಿ ಮಹೋತ್ಸವ ಹಾಗೂ ವಿಶ್ವ ಬಸವಧರ್ಮ ಸಮಾವೇಶದ ಸಮಾರೋಪದ ಪ್ರಯುಕ್ತ ಪಟ್ಟಣದಲ್ಲಿ ಭಾನುವಾರ ವಚನ ಗ್ರಂಥಗಳ ಕಟ್ಟಿನ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಪಟದಿಂದ ಆರಂಭವಾದ ವಚನ ಗ್ರಂಥ ತಾಡೋಲೆ ಕಟ್ಟಿನ, ವಿಶ್ವಗುರು ಬಸವಣ್ಣ, ಮಹಾಂತ ಶಿವಯೋಗಿಗಳ ಭಾವಚಿತ್ರ ಇರುವ ಅಡ್ಡಪಲ್ಲಕ್ಕಿ ಉತ್ಸವ ಪಟ್ಟಣದ ಬಸವಸಾಗರ ವೃತ್ತ, ಬಸ್ ನಿಲ್ದಾಣ ವೃತ್ತ, ಗಡಿಯಾರ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳ ಕಲಾಪ್ರದರ್ಶನ ಆಕರ್ಷಣೆಯಾಗಿತ್ತು.

ಇಲಕಲ್ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ಧೇಶ್ವರ ಮಠದ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಸಿದ್ಧಯ್ಯನಕೋಟೆ ಬಸವಲಿಂಗ ಸ್ವಾಮೀಜಿ, ಗಿರಿಮಲ್ಲನಗೌಡ ಕರಡಕಲ್, ದೊಡ್ಡಪ್ಪ ಹೆಸರೂರು, ವೀರಣ್ಣ ಹುರಕಡ್ಲಿ, ಶರಣಪ್ಪ ಸಕ್ರೀ, ಬಸವರಾಜ ಐದನಾಳ, ವಿಶ್ವನಾಥ ಸಕ್ರೀ,ಶರಣಗೌಡ ಕರಡಕಲ್, ನಾಗಭೂಷಣ, ಮುರುಘೇಂದ್ರಪ್ಪ ಗೊರೇಬಾಳ, ರುದ್ರಮುನಿ ಗೊರೇಬಾಳ, ಡಾ.ಗಂಗಮ್ಮ ಸತ್ಯಂಪೇಟೆ, ಚೆನ್ನಮ್ಮ ಸಕ್ರೀ, ಜಯಶ್ರೀ ಸಕ್ರೀ, ಸೋಮು ಐದನಾಳ, ದರ್ಶನ ಐದನಾಳ, ಬಸವರಾಜ ಹುರಕಡ್ಲಿ ಹಾಗೂ ಇನ್ನಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.