
ಲಿಂಗಸುಗೂರು: ಪಟ್ಟಣದ ತಾಲ್ಲೂಕು ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 2,266 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ರಾಷ್ಟೀಯ ಲೋಕ ಅದಾಲತ ಆಯೋಜಿಸಲಾಗಿತ್ತು. 5,744 ಬಾಕಿ ಪ್ರಕರಣಗಳ ಪೈಕಿ 2266 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ರಾಜಿಯಾಗುವ ಮೂಲಕ ಇತ್ಯರ್ಥಗೊಳಿಸಲಾಗಿದೆ. 6,949 ವಾಜ್ಯಪೂರ್ವ ಪ್ರಕರಣಗಳ ಪೈಕಿ 6,029 ಪ್ರಕರಣಗಳನ್ನು ಇತ್ಯಾರ್ಥಗೊಳಿಸಲಾಯಿತು.
ಕೌಟುಂಬಿಕ ಕಲಹದಿಂದ ದೂರಸರಿಯಲು ಇಚ್ಛಿಸಿದ ದಂಪತಿಗಳ ಪರವಾಗಿ ವಕೀಲರಾದ ಕೆ.ತಸ್ಲೀಮ ವಕೀಲರು ಮತ್ತು ಬಿ.ಬಸವರಾಜ ನ್ಯಾಯಾಲಯಕ್ಕೆ ಬಂದಾಗ ಹಿರಿಯ ಶ್ರೇಣಿ ನ್ಯಾಯಧೀಶೆ ಉಂಡಿ ಮಂಜುಳಾ ಶಿವಪ್ಪ ಅವರು ಪ್ರಕರಣ ಕೈಗೆತ್ತಿಕೊಂಡು ದಂಪತಿಗಳಿಗೆ ಜೀವನದ ಬಗ್ಗೆ ತಿಳಿವಳಿಕೆ ಹೇಳಿ ದಂಪತಿಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರು. ಲೋಕ ಅದಾಲತ್‌ನಲ್ಲಿ ರಾಜಿಯಾಗುವ ಮೂಲಕ ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ಒಂದುಗೂಡಿಸಿದರು.
ಪ್ರಧಾನ ಸಿವಿಲ್ ನ್ಯಾಯಧೀಶ ಅಂಬಣ್ಣ.ಕೆ, ಹಿರಿಯ ವಕೀಲರಾದ ರಾಘವೇಂದ್ರ ಮುತಾಲಿಕ, ವಿಶ್ವನಾಥ, ನಾಗರಾಜ ಎಲಿಗಾರ, ಹಾಜಿಬಾಬು, ಅನಿಲ, ಶಶಿ ಹೊಸಮನಿ, ರವಿ, ಚಂದರಮತಿ, ವಿಜಯಲಕ್ಷ್ಮಿ, ಪ್ರಮೋದ, ಶಿವಲಿಂಗಪ್ಪ , ಕರಿಯಪ್ಪ ಇತರೆ ವಕೀಲರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.