ರಾಯಚೂರು: ನಗರದ ಹೈದರಾಬಾದ್ ಬೈಪಾಸ್ ರಸ್ತೆಯಲ್ಲಿ ಕಂಕರ್ ತುಂಬಿದ್ದ ಲಾರಿಯೊಂದು ಮಗುಚಿ ಚಾಲಕ ಸಹಿತ ಸುಟ್ಟುಹೋಗಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕುಷ್ಟಗಿಯ ಚಾಲಕ ಬಾಲಾಜಿ (25) ಸಜೀವ ದಹನವಾದರು.ಬಳ್ಳಾರಿ ಜಿಲ್ಲೆ ಮರಿಯಮ್ಮನಹಳ್ಳಿಯಿಂದ ತೆಲಂಗಾಣದ ಶಾದ್‌ನಗರಕ್ಕೆ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿತ್ತು. ಲಾರಿ ಸಂಪೂರ್ಣ ಭಸ್ಮವಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.