
ಸಿಂಧನೂರು: ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರ ಸಮಕ್ಷಮದಲ್ಲಿ ಬುದ್ದ, ಬಸವ, ಅಂಬೇಡ್ಕರ್ ತತ್ವ ಸಿದ್ದಾಂತದಡಿ ಪ್ರೇಮಿಗಳಿಬ್ಬರು ಸರಳ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ತಾಲ್ಲೂಕಿನ ಗೀತಾ ಕ್ಯಾಂಪ್‌ನ ರೇಣುಕಮ್ಮ ಬಸಪ್ಪ ಹಿಟ್ಲಾಪುರ ಅವರ ಪುತ್ರ ಮೂರ್ತಿ (27) ಮತ್ತು ಬಾಳಮ್ಮ ದುರುಗಪ್ಪ ಮೇಗೂರು ಅವರ ಪುತ್ರಿ ಪಾರ್ವತಿ (21) ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಈ ಮದುವೆಗೆ ಹುಡುಗಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಪ್ರೇಮಿಗಳಿಬ್ಬರು ಮದುವೆ ಮಾಡಿಸುವಂತೆ ದಲಿತ ಮುಖಂಡರ ಸಹಾಯ ಕೋರಿದ್ದರು.
ಅದರಂತೆ ಎಚ್.ಮರಿಯಪ್ಪ ಹೆಡಗಿಬಾಳ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಮರಿಯಪ್ಪ ಹೆಡಗಿಬಾಳ ವಕೀಲ, ದಲಿತಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಆರ್.ಅಂಬ್ರೋಸ್, ಮರಿಯಪ್ಪ ಜಾಲಿಹಾಳ, ಅಲ್ಲಮಪ್ರಭು ಪೂಜಾರ್, ರಾಮಣ್ಣ ಸಾಸಲಮರಿ, ನಾಗರಾಜ ನಾಯಕ ನೇತೃತ್ವದಲ್ಲಿ ನ.28ರಂದು ನಗರದ ಲಘುವಾಹನ ಚಾಲಕರ ಸಂಘದ ಕಾರ್ ಸ್ಟ್ಯಾಂಡ್ ಬಳಿಯಿರುವ ಅಂಬಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿವಾಹ ಮಾಡಿಸಲಾಯಿತು.
ಮುಖಂಡರಾದ ಮರಿಯಪ್ಪ ಗುಂಜಳ್ಳಿ, ಅರಳಪ್ಪ ಅರಗಿನಮರ ಕ್ಯಾಂಪ್, ಶಿವರಾಜ ಉಪ್ಪಲದೊಡ್ಡಿ, ಬಸವರಾಜ, ಹನುಮೇಶ ಉಪ್ಪಾರ ಸೇರಿದಂತೆ ಕಾರು ಚಾಲಕರ ಸಂಘದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.