ಸಿರವಾರ: ತಾಲ್ಲೂಕಿನ ಮಾಡಗಿರಿ ಗ್ರಾಮದ ಮಹಮ್ಮದ್ ಮೌಲಾನಾ ಚಾಂದ್ ಉರುಸ್ ಗುರುವಾರ ಸಂಭ್ರಮದಿಂದ ನಡೆಯಿತು.
ಪೀಠಾಧಿಪತಿ ಶೇಖ್ ಹುಸೇನ್ ನೇತೃತ್ವದಲ್ಲಿ ಮಂಗಳವಾರ ಸಂಜೆ ಗಂಧದ ಅಭಿಷೇಕ (ಸಂದಲ್) ಹಾಗೂ ಬುಧವಾರ ಸಂಜೆ ಉರುಸ್ ಚಿರಾಗಂ ಜರುಗಿತು. ಗುರುವಾರ ರಾತ್ರಿ ಜಿಯಾರತ್ ಕಾರ್ಯಕ್ರಗಳು ನಡೆದವು.
ಮಾಡಗಿರಿ ಸೇರಿದಂತೆ ಸುತ್ತಲಿನ ಗ್ರಾಮಗಳ ಸರ್ವಧರ್ಮಗಳ ಜನರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.