ಕವಿತಾಳ: ‘ಒಳ ಮೀಸಲಾತಿಯಲ್ಲಿ 101 ಜಾತಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ’ ಎಂದು ದಲಿತ ಮುಖಂಡ ಅಂಬಣ್ಣ ಅರೋಲಿಕರ್ ಹೇಳಿದರು.
ಮಾದಿಗ ಸಮಾಜದ ವತಿಯಿಂದ ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಒಳ ಮೀಸಲು ಹೋರಾಟಗಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
‘ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗದೆ ಹೋದರೆ ಕಾಂಗ್ರೆಸ್ ಸರ್ಕಾರದ ಕತ್ತು ಹಿಸುಕುತ್ತೇವೆ. ಸಮಾಜ ಕಲ್ಯಾಣ ಇಲಾಖೆಯ ಯಡವಟ್ಟಿನಿಂದ ಮೀಸಲು ಗೊಂದಲ ಸೃಷ್ಟಿಯಾಗಿದೆ. ಅ.10ರಂದು ಸಚಿವ ಮಹಾದೇವಪ್ಪ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ಹೇಳಿದರು.
ವಕೀಲ ಶಿವಕುಮಾರ ಮ್ಯಾಗಳಮನಿ ಪ್ರಾಸ್ತಾವಿಕವಾಗಿ ಮಾತನಾಡಿ,‘ಶೈಕ್ಷಣಿಕ, ಉದ್ಯೋಗ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಒಳ ಮೀಸಲು ಜಾರಿ ಮಾಡಬೇಕಾದ ಅಗತ್ಯ ಇದೆ. ಹೋರಾಟಗಾರರಿಗೆ ನೈತಿಕ ಸ್ಥೈರ್ಯ ತುಂಬಲು ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿರಲಿಂಗಪ್ಪ, ಹನುಮಂತಪ್ಪ ಕಾಕರಗಲ್, ದಾನಪ್ಪ ನಿಲೋಗಲ್ ಮತ್ತು ಶಿವಪ್ಪ ಗೊಲ್ದಿನ್ನಿ ಮಾತನಾಡಿದರು.
ಒಳ ಮೀಸಲು ಹೋರಾಟಗಾರರನ್ನು ಸನ್ಮಾನಿಸಲಾಯಿತು.
ಬಸವರಾಜ ಕವಿತಾಳ, ಜಯರಾಜ, ಕರಿಯಪ್ಪ ಗುಡಿಮನಿ, ಮಲ್ಲಯ್ಯ ಬಳ್ಳಾ, ಅಬ್ರಾಹಂ ಹೊನ್ನಟಗಿ, ಹನುಮಂತಪ್ಪ ವೆಂಕಟಾಪುರ, ಮರಿಯಪ್ಪ ಗುತ್ತೇದಾರ, ಮಲ್ಲಪ್ಪ ಕಲಶೆಟ್ಟಿ, ಅಜಿತ್ ಕುಮಾರ ಹೊನ್ನಟಗಿ, ದುರ್ಗಾಪ್ರಸಾದ, ಅರಳಪ್ಪ ತುಪ್ಪದೂರು, ರಮೇಶ ಇರಬಗೇರ, ಈರಣ್ಣ ಕೆಳಗೇರಿ, ಜಂಬಣ್ಣ, ಹನುಮಂತ ಬುಳ್ಳಾಪುರ, ಚಂದ್ರು ಸಿ.ಎಚ್., ಬಸಪ್ಪ ಮ್ಯಾಗಳಮನಿ, ಅಂಬಮ್ಮ ಮ್ಯಾಗಳಮನಿ, ಎಲಿಜಾ ಒವಣ್ಣ, ಹುಸೇನಪ್ಪ ಕಟ್ಟಿಮನಿ, ಪರಶುರಾಮ ಕಬಾಡೆ, ಕಿರಿಲಿಂಗಪ್ಪ ಮ್ಯಾಗಳಮನಿ ಮತ್ತು ಅರಳಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.