
ಪ್ರಜಾವಾಣಿ ವಾರ್ತೆ
ಮಸ್ಕಿ: ಲಿಂಗಸುಗೂರು ಪಿಎಲ್‌ಡಿ ಬ್ಯಾಂಕ್‌ಗೆ ಬುಧವಾರ ನಡೆದ ಚುನಾವಣೆಯಲ್ಲಿ ಮಸ್ಕಿ ಸಾಲಗಾರರ ಕ್ಷೇತ್ರದಿಂದ ಮಲ್ಲಿಕಾರ್ಜುನ ಪರಡ್ಡಿ (ಮೆದಿಕಿನಾಳ) ಅವರು ಬಸನಗೌಡ ಪೊಲೀಸ್ ಪಾಟೀಲರನ್ನು 20 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.
ಚಲಾವಣೆಯಾದ 80 ಮತಗಳಲ್ಲಿ ಮಲ್ಲಿಕಾರ್ಜುನ ಪರಡ್ಡಿ ಅವರಿಗೆ 50 ಮತಗಳು ಲಭಿಸಿದರೆ, ಬಸನಗೌಡ ಪೊಲೀಸ್ ಪಾಟೀಲ ಅವರಿಗೆ 30 ಮತಗಳು ದೊರೆಯಿತು.
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಲ್ಲಿಕಾರ್ಜುನ ಪರಡ್ಡಿ ಅವರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿ, ಪರಡ್ಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.