ADVERTISEMENT

ಮಾಮಡದೊಡ್ಡಿ: ದತ್ತ ಜಯಂತಿ ಅಂಗವಾಗಿ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 12:17 IST
Last Updated 19 ಡಿಸೆಂಬರ್ 2021, 12:17 IST
ಶಕ್ತಿನಗರ ಬಳಿಯ ಮಾಮಡದೊಡ್ಡಿ ಗ್ರಾಮದಲ್ಲಿ ಭಾನುವಾರ ಗುರುದತ್ತಾತ್ರೇಯ ಜಯಂತಿ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಸೇವೆ ನಡೆಯಿತು
ಶಕ್ತಿನಗರ ಬಳಿಯ ಮಾಮಡದೊಡ್ಡಿ ಗ್ರಾಮದಲ್ಲಿ ಭಾನುವಾರ ಗುರುದತ್ತಾತ್ರೇಯ ಜಯಂತಿ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಸೇವೆ ನಡೆಯಿತು   

ಮಾಮಡದೊಡ್ಡಿ (ಶಕ್ತಿನಗರ): ಮಾಮಡದೊಡ್ಡಿ ಗ್ರಾಮದ ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಯೋಗಿರಾಜ ಗುರುದತ್ತಾತ್ರೇಯ ಜಯಂತಿ ಅಂಗವಾಗಿ ಭಾನುವಾರ ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ನಡೆದವು. ಸಗಮಕುಂಟ, ಕೊರ್ತಕುಂದ, ಇಬ್ರಾಹಿಂದೊಡ್ಡಿ, ಕೊರವಿಹಾಳ್‌, ಯರಗುಂಟ ಸೇರಿದಂತೆ ಸುತ್ತಲಿನ ನೂರಾರು ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರುಶನ ಪಡೆದರು.

ಕಾಯಿ ಕರ್ಪೂರ ನೀಡುವ ಮೂಲಕ ಪೂಜೆಯನ್ನು ಸಲ್ಲಿಸಿದರು. ದೇವರ ಘೋಷಣೆಗಳನ್ನು ಕೂಗುತ್ತಾ ಸಕಲ ಬಿರುದಾವಳಿ ಮಂಗಳವಾದ್ಯಗಳೊಂದಿಗೆ ಭಕ್ತರು ಪಲ್ಲಕ್ಕಿ ಸೇವೆಯ ಮೆರವಣಿಗೆ ನಡೆಯಿತು.

ADVERTISEMENT

ಪೀಠಾಧಿಪತಿ ಲೋಕನಾಥ್ ಸ್ವಾಮೀಜಿ, ಕೊರ್ತಕುಂದ ತಿಮ್ಮಪ್ಪ ದೇವಸ್ಥಾನದ ಅರ್ಚಕ ಕೃಷ್ಣಾಮೂರ್ತಿ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.