ADVERTISEMENT

ಮಂತ್ರಾಲಯ: ಏಕಕಾಲಕ್ಕೆ 150 ಕಲಾವಿದರಿಂದ ಸಂಗೀತ ಸೇವೆ

ರಾಯರ ವರ್ಧಂತಿ ಉತ್ಸವದಲ್ಲಿ ನಾದಹಾರ ಸಂಗೀತ ಸೇವೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:01 IST
Last Updated 9 ಮಾರ್ಚ್ 2022, 6:01 IST
 ರಾಯರ ವರ್ಧಂತಿ ಉತ್ಸವದಲ್ಲಿ ನಾದಹಾರ ಸಂಗೀತ ಸೇವೆ
ರಾಯರ ವರ್ಧಂತಿ ಉತ್ಸವದಲ್ಲಿ ನಾದಹಾರ ಸಂಗೀತ ಸೇವೆ   

ರಾಯಚೂರು: ಮಂತ್ರಾಲಯದಲ್ಲಿ ನಡೆಯುತ್ತಿರುವ ರಾಯರ 427ನೇ ವರ್ಧಂತಿ ಉತ್ಸವದ ನಿಮಿತ್ತ ಚೆನ್ನೈನ ಶ್ರೀರಾಘವೇಂದ್ರ ನಾದಹಾರ ಕಲಾ ಟ್ರಸ್ಟ್‌ ಸದಸ್ಯರು ಮಠದ ಪ್ರಕಾರಾದಲ್ಲಿ ಬುಧವಾರ 'ನಾದಹಾರ' ಸಂಗೀತ ಸೇವೆ ಸಮರ್ಪಿಸಿದರು.

150 ಕಲಾವಿದರು ಏಕಕಾಲಕ್ಕೆ ವಾದ್ಯ ನುಡಿಸಿದರು. ಕಳೆದ 18 ವರ್ಷಗಳಿಂದ ಅವಿರತವಾಗಿ ಪ್ರತಿವರ್ಷ ವರ್ಧಂತಿಯಂದು ನಾದಹಾರ ಸಮರ್ಪಣೆ ಸೇವೆ ನಡೆದುಕೊಂಡು ಬಂದಿದೆ.

ಶ್ರೀರಾಘವೇಂದ್ರ ಸ್ವಾಮಿಗಳ ಜನ್ಮಸ್ಥಳ ತಮಿಳುನಾಡಿನ ಶ್ರೀಕುಂಭಕೋಣಂ ನಿಂದಲೂ ಅನೇಕ ಕಲಾವಿದರು ಭಾಗವಹಿಸಿದ್ದಾರೆ.

ADVERTISEMENT

'ನಾದಹಾರ ಟ್ರಸ್ಟ್ ಸದಸ್ಯರು ಸಂಗೀತ ಸೇವೆ ಜೊತೆಗೆ ಒಟ್ಟಾಗಿ ಪ್ರತಿವರ್ಷ ಮಠಕ್ಕೆ ವಿಶೇಷ ಕಾಣಿಕೆಯನ್ನು ಸಮರ್ಪಣೆ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಮಠದ ಗೋ ಶಾಲೆ ನಿರ್ವಹಣೆಗೆ ನೆರವು ಒದಗಿಸಲಾಗಿದೆ' ಎಂದು ಟ್ರಸ್ಟ್ ಸದಸ್ಯ ಪ್ರಶಾಂತ ಅಯ್ಯಂಗಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.