
ಮಾನ್ವಿ: ‘ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದ ವೈಚಾರಿಕ ಮೌಲ್ಯಗಳು ಎಲ್ಲ ಕಾಲಕ್ಕೂ ಆದರ್ಶಪ್ರಾಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹೇಳಿದರು.
ಪಟ್ಟಣದ ಗ್ಯಾಲಕ್ಸಿ ಕಲ್ಯಾಣಮಂಟಪದಲ್ಲಿ ಭಾನುವಾರ ಲೇಖಕ ಚಂದ್ರಶೇಖರ ಸುವರ್ಣಗಿರಿಮಠ ರಚಿಸಿದ ಅಧುನಿಕ ವಚನಗಳ ಸಂಗ್ರಹ ‘ನುಡಿ ನೈವೇದ್ಯ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಲ್ಮಠದ ಪೀಠಾಧ್ಯಕ್ಷ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬಸವಾದಿ ಶರಣರು ವಚನ ಸಾಹಿತ್ಯ ಮೂಲಕ ಪ್ರತಿಪಾದಿಸಿದ ತತ್ವಾದರ್ಶಗಳ ಪಾಲನೆ ಅಗತ್ಯ’ ಎಂದು ಹೇಳಿದರು.
ಲೇಖಕ ರಮೇಶಬಾಬು ಯಾಳಗಿ ಅವರು ‘ನುಡಿ ನೈವೇದ್ಯ’ ಕೃತಿ ಪರಿಚಯ ಭಾಷಣ ಮಾಡಿದರು.
ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.
ಕರ್ತೃ ಚಂದ್ರಶೇಖರ ಸುವರ್ಣಗಿರಿಮಠ, ಹಿರಿಯ ಸಾಹಿತಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಮಸ್ಕಿಯ ವೈದ್ಯ ಡಾ.ಶಿವಶರಣಪ್ಪ ಇತ್ಲಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ.ಹೊಸೂರು, ತಾಲ್ಲೂಕು ಅಧ್ಯಕ್ಷ ಶರಣಬಸವ ನೀರಮಾನ್ವಿ, ನಿವೃತ್ತ ನ್ಯಾಯಾಧೀಶ ಗಿರೆಯ್ಯ ಪಾಟೀಲ, ಬೆಂಗಳೂರಿನ ನ್ಯೂರೋ ಸರ್ಜನ್ ಡಾ.ಚೈತನ್ಯ ಪ್ರಭು, ಶಂಕ್ರಪ್ಪ ಚಿಕ್ಕಗೌಡರ ಮಾಟಮಾರಿ, ಪ್ರಕಾಶಕಿ ರಾಚಮ್ಮ ಸಾಂಬಯ್ಯ ಸ್ವಾಮಿ, ತ್ರಯಂಬಕೇಶ ಮೇದಾ, ಪಂಪಯ್ಯಸ್ವಾಮಿ ಸಾಲಿಮಠ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.