ADVERTISEMENT

ಲಿಂಗಸುಗೂರು: ಮಾರುಕಟ್ಟೆ ಪ್ರದೇಶ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 4:48 IST
Last Updated 17 ನವೆಂಬರ್ 2021, 4:48 IST
ಲಿಂಗಸುಗೂರಿನ ಸಂತೆ ಬಜಾರ ಮಾರುಕಟ್ಟೆಯ ಕೊಳಚೆ ಪ್ರದೇಶದಲ್ಲಿ ಪುರಸಭೆಯಿಂದ ಮರಂ ಹಾಕಿ ಸಮತಟ್ಟುಗೊಳಿಸುವ ಕಾರ್ಯ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಇದ್ದರು
ಲಿಂಗಸುಗೂರಿನ ಸಂತೆ ಬಜಾರ ಮಾರುಕಟ್ಟೆಯ ಕೊಳಚೆ ಪ್ರದೇಶದಲ್ಲಿ ಪುರಸಭೆಯಿಂದ ಮರಂ ಹಾಕಿ ಸಮತಟ್ಟುಗೊಳಿಸುವ ಕಾರ್ಯ ಮಾಡಲಾಯಿತು. ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಇದ್ದರು   

ಲಿಂಗಸುಗೂರು: ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಇಲ್ಲಿನ ತರಕಾರಿ (ಸಂತೆ ಬಜಾರ್‌) ಮಾರುಕಟ್ಟೆ ಜಾಗದ ಒತ್ತುವರಿ ತೆರವು ಮಾಡುವುದರ ಜೊತೆಗೆ ಕೊಳೆಚೆ ಪ್ರದೇಶವನ್ನು ಸ್ವಚ್ಛಗೊಳಿಸಿತು.

ಭಾನುವಾರ ’ಅವ್ಯವಸ್ಥೆ ತಾಣವಾದ ಮಾರುಕಟ್ಟೆ’ ಶಿರ್ಷಿಕೆಯಡಿ ‘ಪ್ರಜಾವಾಣಿ‘ ವರದಿ ಪ್ರಕಟಗೊಳ್ಳುತ್ತಿದ್ದಂತೆ ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್, ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ನೇತೃತ್ವದಲ್ಲಿ ಪೌರ ಕಾರ್ಮಿಕರ ತಂಡ ಸ್ವಚ್ಛಗೊಳಿಸುವ ಜೊತೆಗೆ ಮರಂ (ಜೆಲ್ಲಿ) ಹಾಕಿಸಿ ತೆಗ್ಗು ಗುಂಡಿಗಳ ಸಮತಟ್ಟು ಮಾಡಿದರು.

ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಅವರು, ಮನೆ ಮನೆಗೆ ಭೇಟಿ ನೀಡಿ, ‘ಮನೆಯ ಚಾವಣಿ, ಬಚ್ಚಲು, ಬಟ್ಟೆ, ಮುಸರಿ ಇತರೆ ಬಳಕೆ ನೀರನ್ನು ಸಂತೆ ಬಜಾರ ಬಯಲಿಗೆ ಬಿಡದಿರಿ. ನಿಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡಿಕೊಂಡು ವಾತಾವರಣ ಸ್ವಚ್ಛಂದ ಇಡಲು ಸಹಕರಿಸಬೇಕು. ಮೇಲಿಂದ ಮೇಲೆ ಮಾಡುವ ಮನವಿಗೆ ಸ್ಪಂದಿಸದೆ ಹೋದಲ್ಲಿ ಅಂತಹ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ ಮಾತನಾಡಿ, ‘ಪುರಸಭೆ ಪಟ್ಟಣದ ಸ್ವಚ್ಛತೆಗೆ ಹಾಗೂ ಘನತ್ಯಾಜ್ಯ ವಿಲೆವಾರಿಗೆ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ನಾಗರಿಕರು ಸ್ವಚ್ಛತೆ ಕಾಪಾಡಿಕೊಂಡು ಆರೋಗ್ಯವಂತ ಪರಿಸರ ನಿರ್ಮಾಣಕ್ಕೆ ಸಹಕರಿಸಬೇಕು. ಎಲ್ಲ ಹಂತದಲ್ಲಿ ಪುರಸಭೆಯೆ ಸ್ವಚ್ಛತೆ ಮಾಡಬೇಕು ಎಂಬ ತಪ್ಪು ಕಲ್ಪನೆಯಿಂದ ಹೊರಬನ್ನಿ. ನೀವು ಪುರಸಭೆ ಆಡಳಿತದ ಒಂದು ಭಾಗ ಎಂದು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.