ಮಸ್ಕಿ: ಶಾರ್ಟ್ ಸರ್ಕೀಟ್‌ನಿಂದಾಗಿ ವಿದ್ಯುತ್ ಕಂಬದ ಮೇಲೆ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದ 'ವಾನರ' ಜೀವ ಸ್ಥಳೀಯರ ಸಮಯ ಪ್ರಜ್ಞಯಿಂದಾಗಿ ಉಳಿದಿದೆ. ಈ ಘಟನೆ ಪಟ್ಟಣದ ಎಸ್‌ಬಿಐ ಶಾಖೆ ಎದುರು ಭಾನುವಾರ ರಾತ್ರಿ ನಡೆದಿದೆ.
ಕಂಬ ಏರಿದ್ದ ವಾನರಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಕಂಬದ ಮೇಲೆಯೇ ಸಿಲುಕಿ ನರಳುತಿದ್ದ ಮಾಹಿತಿ ತಿಳಿದ ರಾಕೇಶ ಪಾಟೀಲ ಮತ್ತು ಅವರ ತಂಡದವರು ಸ್ಥಳಕ್ಕೆ ಧಾವಿಸಿ ಜೆಸ್ಕಾಂ ಸಿಬ್ಬಂದಿಯವರಿಗೆ ಕರೆಮಾಡಿ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ.
ಕೋತಿ ಮರಿಯನ್ನು ಕಂಬದ ಮೇಲಿಂದ ರಕ್ಷಿಸಲಾಯಿತು. ಪಶು ವೈದ್ಯಕೀಯ ಆಸ್ಪತ್ರೆಗೆ ತೆರಳಿ ಸುಟ್ಟ ಗಾಯಗಳಿಂದ ನರಳುತ್ತಿದ್ದ ವಾನರಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಚೇತರಿಸಿಕೊಂಡ ಬಳಿಕ ಪಟ್ಟಣದ ಭ್ರಮರಾಂಬ ದೇವಸ್ಥಾನದ ಬಳಿ ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.