ADVERTISEMENT

ಮುದಗಲ್ | ಸಾಮೂಹಿಕ ವಿವಾಹದಿಂದ ಆರ್ಥಿಕ ಹೊರೆ ಕಡಿಮೆ: ಶರಣಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 5:48 IST
Last Updated 16 ಫೆಬ್ರುವರಿ 2026, 5:48 IST
<div class="paragraphs"><p>ಗಂಗಾವತಿ ನಗರದ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಸಾಮೂಹಿಕ ವಿವಾಹಗಳು ಜರುಗಿದವು.</p></div>

ಗಂಗಾವತಿ ನಗರದ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಸಾಮೂಹಿಕ ವಿವಾಹಗಳು ಜರುಗಿದವು.

   

ಮುದಗಲ್: ‘ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ತಗ್ಗಿ, ಪ್ರಗತಿಗೆ ಪೂರಕವಾಗುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಸಮೀಪದ ಕನ್ನಾಪುರಹಟ್ಟಿಯಲ್ಲಿ ಪರಮಾನಂದ ಹಾಗೂ ಅಮೋಘ ಸಿದ್ಧೇಶ್ವರ ಜಾತ್ರೆ ನಿಮಿತ್ತ ಜರುಗಿದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಕನ್ನಾಪುರಹಟ್ಟಿ ಗ್ರಾಮಕ್ಕೆ ಅಗಸಿ ಹಾಗೂ ಕಲ್ಯಾಣ ಮಂಟಪ ನಿರ್ಮಿಸುವ ಭರವಸೆ ನೀಡಿದರು. ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಅದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡಬೇಡಬಾರದು. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು’ ಎಂದು ಹೇಳಿದರು.

‘ಬೆಳಿಗ್ಗೆ ಪರಮಾನಂದ, ಅಮೋಘ ಸಿದ್ಧೇಶ್ವರ ದೇವರಿಗೆ ಪೂಜಾ ವಿಧಿವಿಧಾನಗಳು ಜರುಗಿದವು. ಪರಮಾನಂದ ದೇವಸ್ಥಾನದಿಂದ ಕಳಸ ಮೆರವಣಿಗೆ ಯೊಂದಿಗೆ ಮಜ್ಜನಬಾವಿಯಲ್ಲಿ ಗಂಗಪೂಜೆ ನೆರವೇರಿತು. ಹುನುಕುಂಟಿ ಚಿದಾನಂದ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. 21 ಜೋಡಿಗಳ ವಿವಾಹ ಜರುಗಿತು. ಶೇಖ್‌ ರಸೂಲ್‌, ಪಾಮಯ್ಯ ಮುರಾರಿ ಮಾತನಾಡಿದರು.

ಕರಡಕಲ್ ಭೂಪನಗೌಡ, ಶ್ರೀಕಾಂತಗೌಡ ಪಾಟೀಲ, ಮಲ್ಲಪ್ಪ ಕನ್ನಾಪುರ ಹಟ್ಟಿ, ಶಂಕ್ರಯ್ಯ ಒಡೆಯರ, ರಮೇಶ, ಸಣ್ಣಸಿದ್ದಯ್ಯ ಸ್ವಾಮಿ, ಕೆಡಿಪಿ ಸದಸ್ಯ ಪರಮೇಶ ಕನ್ನಾಪುರ ಹಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಹೇಮಾ ನಾಯಕ, ಪರಾಮಯ್ಯ ಗುರುಗಳು, ಕೇಶವರೆಡ್ಡಿ ಯರದಿಹಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.