
ಮಾನ್ವಿ: ತಾಲ್ಲೂಕಿನ ಬೈಲಮರ್ಚೆಡ್ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮೇವಿನ ಬಣವೆ, ಜೋಳದ ಸೊಪ್ಪೆ ಹಾಗೂ ಹತ್ತಿಯ ರಾಶಿ ಸುಟ್ಟು, ಅಪಾರ ಪ್ರಮಾಣದ ವಸ್ತುಗಳು ಶುಕ್ರವಾರ ಹಾನಿಯಾಗಿದೆ.
ಗ್ರಾಮದ ರೈತರಾದ ಬಸವರಾಜ, ಚಂದ್ರ, ಅನುಸೂಯಮ್ಮ, ಆಂಜನೇಯ, ಈಶಪ್ಪ, ಮೌನೇಶ ಅವರು ತಮ್ಮ ಮನೆ ಹತ್ತಿರ ತಮ್ಮ ಜಾನುವಾರುಗಳಿಗಾಗಿ ಬಯಲು ಪ್ರದೇಶದಲ್ಲಿ ಸಂಗ್ರಹಿಸಿದ್ದ ಭತ್ತದ ಮೇವಿನ ಎರಡು ಬಣವೆಗಳು ಹಾಗೂ ಒಂದು ಜೋಳದ ಸೊಪ್ಪೆಯ ಬಣವೆ ಒಂದು ಹಾಗೂ ಹತ್ತಿ ರಾಶಿ ಸಂಪೂರ್ಣವಾಗಿ ಸುಟ್ಟು ಸುಮಾರು ₹4 ಲಕ್ಷ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಮಾನ್ವಿ ಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ರಂಗಪ್ಪ, ಸಹಾಯಕ ಠಾಣಾಧಿಕಾರಿ ಹಾಜಿಮೀಯಾ ಹಾಗೂ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡು ಬೆಂಕಿ ವ್ಯಾಪಿಸದಂತೆ ತಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.