ಸಿಂಧನೂರು: ಮೇ.17, 18 ರಂದು ನಗರದಲ್ಲಿ ನಡೆಯುವ ‘ಮೇ ಸಾಹಿತ್ಯ ಮೇಳ’ದ ಅಂಗವಾಗಿ ನಗರದ ನೊಬೆಲ್ ಪದವಿ ಕಾಲೇಜಿನಲ್ಲಿ ಭಾನುವಾರ 5ನೇ ಪೂರ್ವಭಾವಿ ಸಭೆ ನಡೆಯಿತು.
ಸಮ್ಮೇಳನಕ್ಕೆ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಬರುವವರಿಗೆ ಎರಡು ದಿನಗಳ ಕಾಲ ವಸತಿ , ಬೆಳ್ಳಿಗೆ ಉಪಠಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಬೇಕು. ಪರಿಚಯಸ್ಥರು ತಲಾ ಇಬ್ಬರಂತೆ ಮನೆಗಳಲ್ಲಿ ವಸತಿ ನೀಡಿದರೆ ಅನುಕೂಲವಾಗಲಿದೆ ಎಂದು ಪ್ರಧಾನ ಸಂಚಾಲಕ ಬಸವರಾಜ ಸೂಳಿಬಾವಿ ತಿಳಿಸಿದರು.
ಹಣಕಾಸು ಸಂಗ್ರಹ, ಕವಿಗೋಷ್ಠಿಗೆ ಜಿಲ್ಲೆಗಳ ಆಯ್ದ ಕವಿಗಳ ಆಯ್ಕೆ, ಸಿಂಧನೂರು ತಾಲ್ಲೂಕಿನ ಪ್ರಮುಖ 5 ಬೇಡಿಕೆಗಳ ಈಡೇರಿಕೆಗಾಗಿ ನಿರ್ಣಯ ಅಂಗೀಕರಿಸುವುದು, ವಿವಿಧ ಉಪಸಮಿತಿಗಳ ಕಾರ್ಯಚಟುವಟಿಕೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಡಿ.ಎಚ್.ಪೂಜಾರ, ಎಸ್.ದೇವೇಂದ್ರಗೌಡ, ಟಿ.ಹುಸೇನಸಾಬ್, ಪಿ.ರುದ್ರಪ್ಪ, ಕರೇಗೌಡ ಕುರುಕುಂದಿ, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ಬಸಲಿಂಗಪ್ಪ ಬಾದರ್ಲಿ, ಶಂಕರ್ ಗುರಿಕಾರ, ನಾಗರಾಜ ಪೂಜಾರ, ಎಂ.ಗೋಪಾಲಕೃಷ್ಣ, ಮುತ್ತು ಬಿಳಿಯಲೆ, ಅಶೋಕ ನಂಜಲದಿನ್ನಿ ಸೇರಿದಂತೆ ಕೊಪ್ಪಳ, ಗದಗ, ರಾಯಚೂರು, ವಿಜಯಪುರ ಜಿಲ್ಲೆಗಳಿಂದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.