ADVERTISEMENT

ಸಂಭ್ರಮದ ಮುದಗಲ್ ಜ್ಞಾನೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:20 IST
Last Updated 21 ಆಗಸ್ಟ್ 2025, 7:20 IST
ಮುದಗಲ್‌ನ ಮೇಗಳಪೆಟೆಯಲ್ಲಿರುವ ಜ್ಞಾನೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಿದ ಕಲ್ಲು ಎತ್ತುವ ಸ್ಫರ್ಧೆ
ಮುದಗಲ್‌ನ ಮೇಗಳಪೆಟೆಯಲ್ಲಿರುವ ಜ್ಞಾನೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಜರುಗಿದ ಕಲ್ಲು ಎತ್ತುವ ಸ್ಫರ್ಧೆ   

ಮುದಗಲ್: ಪಟ್ಟಣದ ಮೇಗಳಪೇಟೆಯ ಜ್ಞಾನೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ಜಾತ್ರೆ ನಿಮಿತ್ತ ಜ್ಞಾನೇಶ್ವರರ ಕತೃ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮೀಣ ಕ್ರೀಡಾಕೂಟಗಳಾದ ಕಲ್ಲು, ಗುಂಡು ಎತ್ತುವುದು, ಕಬಡ್ಡಿ ಪಂದ್ಯಾವಳಿ ಶ್ರೀಮಠದ ಆವರಣದಲ್ಲಿ ಜರುಗಿದವು. ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಲಾಯಿತು.

‌ಭಕ್ತರು ಕಾಯಿ, ನೈವೇದ್ಯ ಅರ್ಪಿಸಿ ದೀಘದಂಡ ನಮಸ್ಕಾರ ಹಾಕಿದರು. ಶ್ರಾವಣ ಮಾಸದ ಕೊನೆ ಮಂಗಳವಾರ ಭಕ್ತರು ಭಜನಾ ಹಾಡು, ಡೊಳ್ಳಿನ ಪದ ಹಾಗೂ ಇತರೆ ಭಕ್ತಿ ಸಮರ್ಪಣೆ ಮಾಡಿ ದೇವರ ಕೃಪೆಗೆ ಪಾತ್ರರಾದರು. 

ADVERTISEMENT
ಮುದಗಲ್ ನ ಮೇಗಳಪೆಟೆಯಲ್ಲಿರುವ ಜ್ಞಾನೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಗುಂಡು ಎತ್ತವ ಸ್ಫರ್ಧೆ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.