ADVERTISEMENT

ಮುದಗಲ್ | ಕಾಲುವೆಗೆ ನೀರು ಸ್ಥಗಿತ: ರೈತರ ಆತಂಕ

ಡಾ.ಶರಣಪ್ಪ ಆನೆಹೊಸೂರು
Published 26 ಮಾರ್ಚ್ 2025, 6:51 IST
Last Updated 26 ಮಾರ್ಚ್ 2025, 6:51 IST
ಮುದಗಲ್ ಸಮೀಪದ ರಾಂಪುರ ಏತ ನೀರಾವರಿ ಕಾಲುವೆ ವ್ಯಾಪ್ತಿಯ ಭಾಗದ ರೈತರ ಜಮೀನುನಲ್ಲಿ ಬೆಳೆದ ಭತ್ತದ ಫಸಲು
ಮುದಗಲ್ ಸಮೀಪದ ರಾಂಪುರ ಏತ ನೀರಾವರಿ ಕಾಲುವೆ ವ್ಯಾಪ್ತಿಯ ಭಾಗದ ರೈತರ ಜಮೀನುನಲ್ಲಿ ಬೆಳೆದ ಭತ್ತದ ಫಸಲು   

ಮುದಗಲ್: ರಾಂಪುರ ಏತ ನೀರಾವರಿ ಕಾಲುವೆಗೆ ಮಾ.25ಕ್ಕೆ ನೀರು ಸ್ಥಗಿತ ಮಾಡುತ್ತಿದ್ದರಿಂದ ಭತ್ತ ಬೆಳೆ ಬೆಳೆದ ರೈತರು ಆತಂಕದಲ್ಲಿದ್ದಾರೆ.

ರಾಂಪುರ ಏತ ನೀರಾವರಿ ಕಾಲುವೆ ವ್ಯಾಪ್ತಿಯಲ್ಲಿ ರಾಂಪುರ, ನವಲಿ, ಕಮಲದಿನ್ನಿ, ನರಕಲದಿನ್ನಿ, ಚಿತ್ತಾಪುರ, ಜಾವೂರ, ರೋಡಲಬಂಡಾ, ನಂದಿಹಾಳ, ಬೆಂಡೋಣಿ, ಆನೆಹೊಸೂರು ಹೊಸೂರು, ಬಯ್ಯಾಪುರ, ಭೋಗಾಪುರ, ಬೊಮ್ಮನಾಳ, ಬಂಡಿ ಸುಂಕಾಪುರ, ನೀರಲಕೇರಿ ಸೇರಿದಂತೆ ಇನ್ನಿತರ ಗ್ರಾಮದ ರೈತರ ಜಮೀನಿಗೆ ನೀರು ಹರಿಯುತ್ತಿದೆ.

’ಈ ಭಾಗದ ರೈತರು ಹಿಂಗಾರು ಬೆಳೆಗೆ ಭತ್ತ ನಾಟಿ ಮಾಡಿದ್ದಾರೆ. ಭತ್ತ ತೆನೆ ಬಿಡುತ್ತಿದೆ. ಭತ್ತಕ್ಕೆ ಇನ್ನೂ ಒಂದು ನೀರು ಬಿಟ್ಟರೆ ಮಾತ್ರ ಭತ್ತದ ಫಸಲು ಕೈಗೆ ಬರುತ್ತಿದೆ. ನೀರು ಬಾರದಿದ್ದರೆ, ಶೇ.70 ರಷ್ಟು ಜಮೀನಿನ ಭತ್ತ ಹಾಳಾಗುತ್ತಿದೆ. ಒಂದು ಚೀಲ ಭತ್ತ ಮನೆಗೆ ಬರುವುದಿಲ್ಲ’ ಎಂದು ರೈತ ಶಿವರಾಜ ಆತಂಕ ವ್ಯಕ್ತ ಪಡಿಸುತ್ತಾರೆ.

ADVERTISEMENT

ಐಸಿಸಿ ಸಭೆಯಲ್ಲಿ ಮಾ 22 ಕ್ಕೆ ನೀರು ಸ್ಥಗಿತ ಮಾಡಿ, ಮತ್ತೆ ಏ.1 ರಿಂದ 6 ವರಿಗೆ ಕಾಲುವೆ ನೀರು ಬಿಡುವುದಾಗಿ ಹೇಳಿದ್ದರು. ಈ ತಿರ್ಮಾನದಿಂದ ರಾಂಪುರ ಏತ ನೀರಾವರಿ ಕಾಲುವೆ ವ್ಯಾಪ್ತಿಯ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದರು. ನಾರಾಯಣಪುರ ನದಿಯ ಬಲ ದಂಡೆ ಹಾಗೂ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರು ತಮ್ಮ ಜಮೀನುಗಳಿಗೆ ನೀರು ಬರುವುದಿಲ್ಲ. ಮಾ.25 ವರಗೆ ನಿರಂತರವಾಗಿ ಕಾಲುವೆ ನೀರು ಹರಿಸಿ ಎಂದು ತಮ್ಮ ಶಾಸಕರ ಮೂಲಕ ಒತ್ತಾಯ ಮಾಡಿಸಿದ್ದರು. ಇದರಿಂದ ಮಾ. 25ರವರಗೆ ನೀರು ಹರಿಸಿ ನಂತರ ಸ್ಥಗಿತ ಮಾಡುತ್ತೇವೆ ಎಂದು ಮತ್ತೊಂದು ಐಸಿಸಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು.

ಈ ತಿರ್ಮಾನವು ತಡವಾಗಿ ಭತ್ತ ನಾಟಿ ಮಾಡಿದ ರಾಂಪುರ ಏತ ನೀರಾವರಿ ಕಾಲುವೆ ವ್ಯಾಪ್ತಿಯ ಭಾಗದ ರೈತರಿಗೆ ಸಂಕಷ್ಟ ಸೃಷ್ಟಿಸಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ. ಉತ್ತಮ ಫಸಲು ಬಂದಿದೆ. ತನೆ ಹಾಲು ಕಟ್ಟುವ ಹಂತದಲ್ಲಿದೆ. ಹಾಲು ಕಟ್ಟುವ ವೇಳೆಯಲ್ಲಿ ನೀರು ಇಲ್ಲ ಎಂದರೆ ಫಸಲು ಕೈಗೆ ಬರುವದಿಲ್ಲ. ಇನ್ನೂ ಒಂದು ಬಾರಿ ನೀರು ಕಾಲುವೆ ಹರಿಸಿದರೆ ಫಸಲು ಕೈಗೆ ಬರುತ್ತಿದೆ.

’ಈಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಗದ್ದೆಯಲ್ಲಿದ ನೀರು ಬತ್ತುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮುಂದೆ ನೀರು ಹರಿಸುವದಿಲ್ಲ ಎಂಬ ಮಾತು ಸಂಕಷ್ಟಕ್ಕೆ ಈಡುಮಾಡಿದೆ. ನದಿಯಲ್ಲಿ ಇನ್ನೂ ನೀರಿನ ಪ್ರಮಾಣ ಇದೆ. ರಾಂಪುರ ಏತ ನೀರಾವರಿ ಕಾಲುವೆಗೆ ನೀರು ಹರಿಸಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ನಮ್ಮ ನದಿಯ ನೀರು ಆಂಧ್ರಪ್ರದೇಶಕ್ಕೆ ಹರಿಸಿದರು. ನಮ್ಮ ಭಾಗದ ರೈತರ ಜಮೀನಿಗೆ ನೀರು ಹರಿಸುತ್ತಿಲ್ಲ’ ಎಂದು ತಾಲ್ಲೂಕು ರೈತ ಸಂಘದ ಕಾರ್ಯದರ್ಶಿ ಖಾಜಾವಲಿ ನಂದಿಹಾಳ ಆರೋಪಿಸಿದರು.

ಮಾ.25 ವರಿಗೆ ಕಾಲುವೆಗೆ ನೀರು ಹರಿಸಲು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ನಿಯಮ ಪಾಲನೆ ಮಾಡುತ್ತೇವೆ.
ಸುರೇಂದ್ರಬಾಬು ಇಇ. ಕೃಷ್ಣಾ ಭಾಗ್ಯ ಜಲ ನಿಗಮ
ಮಾನವೀಯತೆ ಆಧಾರದ ಮೇಲೆ ಆಂಧ್ರಪ್ರದೇಶಕ್ಕೆ ನೀರು ಹರಿಸಿದಂತೆ ಅದೇ ಮಾನವೀಯತೆ ಪ್ರಕಾರವಾಗಿ ನಮ್ಮ ಭಾಗದ ರೈತರ ಬೆಳೆ ಹಾನಿಯಾಗುವುದನ್ನು ತಡೆಯಲು ಕಾಲುವೆಗೆ ಇನ್ನೊಂದು ಬಾರಿ ನೀರು ಹರಿಸಬೇಕು’
ಸಂಗನಗೌಡ ಹೊಸೂರು ಉಪಾಧ್ಯಕ್ಷರು ತಾಲ್ಲೂಕು ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.