ಮುದಗಲ್: ‘ಕಂಪ್ಯೂಟರ್ ಹಾಗೂ ಝರಾಕ್ಸ್ ಅಂಗಡಿಕಾರರ ಸಂಘಟನೆಯ ಸದಸ್ಯರು ಸಂಘದ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘವೇಂದ್ರ ಗುಮಾಸ್ತೆ ಹೇಳಿದರು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘ ಉದ್ಘಾಟಿಸಿ ಮಾತನಾಡಿ,‘ಪಟ್ಟಣದಲ್ಲಿ 30 ವರ್ಷಗಳಿಂದ ಝರಾಕ್ಸ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಂತ ಉನ್ನತ ತಂತ್ರಜ್ಞಾನದ ಝರಾಕ್ಸ್ ಯಂತ್ರಗಳನ್ನು ಬಳಸುತ್ತಿದ್ದೇವೆ. ಎಲ್ಲರೂ ಸೇವಾ ಮನೋಭಾವ ಹೊಂದಿರಬೇಕು’ ಎಂದರು.
ಸಂಘದ ಅಧ್ಯಕ್ಷ ಅನಿಲಕುಮಾರ ಕುನಪಲ್ಲಿ ಹಾಗೂ ಉಪಾಧ್ಯಕ್ಷ ಮೌಲಾ ಮಾತನಾಡಿದರು.
ಕಾರ್ಯದರ್ಶಿ ಫಾರೂಕ್ ಅರಬ್, ಖಜಾಂಚಿ ಶರಣು ಗುಡೂರ, ಅಲ್ತಾಫ್ ಹಾಗೂ ಹಾಸೀಂಪೀರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.