ಕವಿತಾಳ: ಮೊಹರಂ ಅಂಗವಾಗಿ ಪಟ್ಟಣದಲ್ಲಿ ಯುವಕರು ಹೆಜ್ಜೆ ಕುಣಿತ ಪ್ರದರ್ಶಿಸಿದರು.
ಬಸಾಪುರ ಗ್ರಾಮದಿಂದ ಬಂದಿದ್ದ ಯುವಕರ ತಂಡ ಇಲ್ಲಿನ ಶಿವಪ್ಪ ತಾತನ ಮಠದಲ್ಲಿ ಹೆಜ್ಜೆ ಕುಣಿತ ಪ್ರದರ್ಶಿಸಿತು.
ಕೈಯಲ್ಲಿ ಸಿಂಗರಿಸಿದ ಛತ್ರಿಗಳನ್ನು ಹಿಡಿದಿದ್ದರು. ಕಾಲಿಗೆ ಕಟ್ಟಿದ ಗೆಜ್ಜೆ ನಾದ, ಅಬ್ಬರದ ಹಲಗೆ ಸದ್ದಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ ಯುವಕರ ಉತ್ಸಾಹ ನೋಡಿದ ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಸಾಪುರ ಗ್ರಾಮದ ಯಲ್ಲಪ್ಪ, ಬಸವರಾಜ, ದುರುಗೇಶ, ಬಸವಲಿಂಗಯ್ಯ ಸ್ವಾಮಿ, ಕನಕ, ಮಹೇಶ, ಗಣೇಶ, ಯಂಕಪ್ಪ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.