ಮಸ್ಕಿ: ಭೋವಿ ಹಾಗೂ ಸಂಬಂಧಿಸಿದ ಜಾತಿಗಳು ಎಸ್.ಸಿ ಪಟ್ಟಿಯಲ್ಲಿವೆ. ಜಾತಿ ಪ್ರಮಾಣ ಪತ್ರದ ನೈಜತೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿ ಭೋವಿ (ಬೋಯಿ) ಸಮಾಜದ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಭೋವಿ ಸಮಾಜದ ಮುಖಂಡ ಯಮನಪ್ಪ ಭೋವಿ ಮಾತನಾಡಿ,‘ಹಲವು ವರ್ಷಗಳಿಂದ ಎಸ್.ಸಿ ಜಾತಿ ಪ್ರಮಾಣ ಪಡೆದುಕೊಂಡು ಅನೇಕ ಸರ್ಕಾರಿ ನೌಕರಿ ಪಡೆದುಕೊಂಡಿದ್ದೇವೆ. ಕೆಲವರು ಭೋಯಿ, ಭೋವಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಬಾರದು ಎಂದು ದೂರು ನೀಡಿರುತ್ತಾರೆ. ದೂರಿನ ಅನ್ವಯ ಜಾತಿ ಪ್ರಮಾಣ ಪತ್ರದ ನೈಜತೆ ಪರಿಶೀಲನೆ ಮಾಡಬೇಕು’ ಎಂದರು.
‘ದಾಖಲಾತಿ ಪರಿಶೀಲನೆ ಮಾಡಿ ಬೋಯಿ, ಭೋವಿ ಸಮಾಜಕ್ಕೆ ಎಸ್.ಸಿ. ಪ್ರಮಾಣ ಪತ್ರ ನೀಡಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ ಪ್ರತಿಕ್ರಿಯಿಸಿ,‘ಜಾತಿ ಪಟ್ಟಿ ಪರಿಶೀಲಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಭೋವಿ ಸಮಾಜದ ಮುಖಂಡ ನಾಗರಾಜ ಬೆನಕನಾಳ, ಬಸ್ಸಪ್ಪ ಭೋವಿ, ರಮೇಶ, ಮಹಾಂತೇಶ, ಬಸವರಾಜಪ್ಪ ಪೊಲೀಸ್ ಪಾಟೀಲ, ಮಹಾಂತೇಶ ಕಲ್ಲೂರು, ಭೀಮಶಿ ಸಾಹುಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.