ಮಸ್ಕಿ: ‘ಬಿಜೆಪಿಯ ಸಿದ್ಧಾಂತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ಕ್ಷೇತ್ರದ ಜನರು ಸ್ವ–ಇಚ್ಛೆಯಿಂದ ಆನ್ ಲೈನ್ ಮೂಲಕ ಸದಸ್ಯರಾಗುತ್ತಿದ್ದಾರೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ 11, 12 ಹಾಗೂ 13ನೇ ವಾರ್ಡ್‌ನಲ್ಲಿ ಮಂಗಳವಾರ ಬಿಜೆಪಿ ಮಂಡಲ ಘಟಕ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರನ್ನು ಸದಸ್ಯರನ್ನಾಗಿ ಮಾಡಬೇಕು ಎಂದರು.
ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಪುರಸಭೆ ಬಿಜೆಪಿ ಸದಸ್ಯರಾದ ಚೇತನ ಪಾಟೀಲ, ರವಿಕುಮಾರ ಪಾಟೀಲ, ಮೌನೇಶ ಮುರಾರಿ, ಸುರೇಶ ಹರಸರೂರು, ಭರತ್ ಶೇಠ್, ಮುಖಂಡರಾದ ಡಾ. ಬಿ.ಎಚ್.ದಿವಟರ್, ಪ್ರಸನ್ನ ಪಾಟೀಲ, ಡಾ.ಪಂಚಾಕ್ಷರಯ್ಯ, ಡಾ.ಸಂತೋಷ, ಬಸವರಾಜ ಬುಕ್ಕಣ್ಣ, ಯಲ್ಲೋಜಿರಾವ್ ಕೊರೆಕಾರ, ಸೂಗಣ್ಣ ಬಾಳೇಕಾಯಿ, ಮಸೂದ್ ಪಾಷಾ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.