ADVERTISEMENT

ನಾಗರಪಂಚಮಿ ಸಂಭ್ರಮದಿಂದ ಆಚರಣೆ

ಮನೆಗಳಲ್ಲಿ ವಿವಿಧ ಖಾದ್ಯಗಳನ್ನು ಸವಿಯುವ ಸಂತೋಷ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 14:25 IST
Last Updated 12 ಆಗಸ್ಟ್ 2021, 14:25 IST
ರಾಯಚೂರಿನ ಗಂಜ್‌ ರಸ್ತೆಯಲ್ಲಿ ನಾಗರಪಂಚಮಿ ನಿಮಿತ್ತ ನಾಗರಮೂರ್ತಿಗೆ ಮಹಿಳೆಯರು ಸಾಮೂಹಿಕವಾಗಿ ಗುರುವಾರ ಪೂಜೆ ಸಲ್ಲಿಸಿದರು
ರಾಯಚೂರಿನ ಗಂಜ್‌ ರಸ್ತೆಯಲ್ಲಿ ನಾಗರಪಂಚಮಿ ನಿಮಿತ್ತ ನಾಗರಮೂರ್ತಿಗೆ ಮಹಿಳೆಯರು ಸಾಮೂಹಿಕವಾಗಿ ಗುರುವಾರ ಪೂಜೆ ಸಲ್ಲಿಸಿದರು   

ರಾಯಚೂರು: ಜಿಲ್ಲೆಯಲ್ಲಿ ಶ್ರಾವಣಮಾಸದ ನಾಗರಪಂಚಮಿ ಹಬ್ಬವನ್ನು ಮಹಿಳೆಯರು ಸಂಭ್ರಮ, ಸಂತೋಷದಿಂದ ಆಚರಿಸಿದರು.

ಗುರುವಾರ ಬೆಳಗಾಗುತ್ತಿದ್ದಂತೆ ಮಹಿಳೆಯರು ಗುಂಪು ಗುಂಪಾಗಿ ದೇವಸ್ಥಾನಗಳತ್ತ ತೆರಳುವುದು ಸಾಮಾನ್ಯವಾಗಿತ್ತು. ಕಲ್ಲಿನ ನಾಗರ ಮೂರ್ತಿಗಳಿಗೆ ಹಾಲುಹಾಕಿ, ದೀಪ ಉರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರಳಿಕಟ್ಟೆಗಳ ಮೇಲಿರುವ ನಾಗಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದಲ್ಲದೆ, ಪ್ರದಕ್ಷಿಣೆ ಹಾಕುತ್ತಿರುವುದು ಕಂಡುಬಂತು.

ನಾಗರಪಂಚಮಿ ನಿಮಿತ್ತ ಪ್ರತಿಯೊಬ್ಬರ ಮನೆಗಳಲ್ಲೂ ಸಿಹಿಖಾದ್ಯಗಳನ್ನು ತಯಾರಿಸಲಾಗಿದೆ. ಲಡ್ಡು, ಎಳ್ಳು ಹಾಗೂ ಚಕ್ಕುಲಿಗಳನ್ನು ಮಕ್ಕಳು ಸವಿದು ಸಂತೋಷಪಟ್ಟರು. ಮಕ್ಕಳು ಕೊಬ್ಬರಿ ಗುಂಡಗಳನ್ನು ತಿರುಗಿಸಿ ಆಟವಾಡಿದರು. ಕೆಲವು ಕಡೆಗಳಲ್ಲಿ ಮಹಿಳೆಯರು ಜೋಕಾಲಿಗಳಲ್ಲಿ ತೂಗಿಕೊಂಡು ಹಬ್ಬದ ಸಡಗರ ಹೆಚ್ಚಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.