ರಾಯಚೂರು: ಇಲ್ಲಿಯ ನವೋದಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿ ಬುಧವಾರ ನಿಸಾರ್ ಉಪಗ್ರಹ ಉಡಾವಣೆಯನ್ನು ನೇರವಾಗಿ ವೀಕ್ಷಿಸಿದರು.
ನವೋದಯ ಸೆಂಟ್ರಲ್ ಸ್ಕೂಲ್‌ನ 8, 9 ಮತ್ತು 10ನೇ ತರಗತಿಯ 45 ವಿದ್ಯಾರ್ಥಿಗಳು ಹಾಗೂ ನಾಲ್ಕು ಅಧ್ಯಾಪಕರ ತಂಡವು ನಿಸಾರ್ ಉಡಾವಣೆ ವೀಕ್ಷಿಸಿ ಹೊಸ ಅನುಭವ ಪಡೆದರು.
ಸಂಸ್ಥೆಯ ಅಧ್ಯಕ್ಷ ಎಸ್. ಆರ್. ರೆಡ್ಡಿ, ನಿರ್ದೇಶಕಿ ಡಾ. ಲತಿಕಾ ಭಾಟಿಯಾ ಹಾಗೂ ಪ್ರಾಚಾರ್ಯ ಎಂ. ವಿ. ರಾಜನ್. ನಸೀಮ್ ಫಿರ್ದೌಸ್, ಶ್ರಿಮತಿ ರೂಪಾಲಿ ತ್ರಿಪಾಠಿ, ಶ್ರೀ ಸಂಜಯ್ ಠಾಕೂರ್ ಹಾಗೂ ಶ್ರೀ ಅಮಿತ್ ಮಿಶ್ರಾ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.