ADVERTISEMENT

ನೂತನ ರಾಯಚೂರು ವಿಶ್ವವಿದ್ಯಾಲಯಕ್ಕೆ ದಾಖಲೆಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:47 IST
Last Updated 8 ಏಪ್ರಿಲ್ 2021, 16:47 IST
ತಾಲ್ಲೂಕಿನ ರಾಯಚೂರು ವಿಶ್ವವಿದ್ಯಾಲಯಕ್ಕೆ ಗುರುವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ರಾಯಚೂರು ವಿಶ್ವವಿದ್ಯಾಲಯದ ಪ್ರೊ.ರಾಮಸ್ವಾಮಿ ಅವರಿಗೆ  ಅಧಿಕೃತವಾಗಿ ಆಸ್ತಿಗಳ ದಾಖಲೆಗಳನ್ನು ಹಸ್ತಾಂತರಿದರು
ತಾಲ್ಲೂಕಿನ ರಾಯಚೂರು ವಿಶ್ವವಿದ್ಯಾಲಯಕ್ಕೆ ಗುರುವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ರಾಯಚೂರು ವಿಶ್ವವಿದ್ಯಾಲಯದ ಪ್ರೊ.ರಾಮಸ್ವಾಮಿ ಅವರಿಗೆ  ಅಧಿಕೃತವಾಗಿ ಆಸ್ತಿಗಳ ದಾಖಲೆಗಳನ್ನು ಹಸ್ತಾಂತರಿದರು   

ರಾಯಚೂರು: ರಾಯಚೂರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿದ ಹಿನ್ನೆಲೆಯಲ್ಲಿ ಸ್ಥಿರಾಸ್ತಿ, ಚರಾಸ್ತಿ, ಸಿಬ್ಬಂದಿ ಪಟ್ಟಿ, ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪಟ್ಟಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಇಲ್ಲಿನ ನೂತನ ರಾಯಚೂರು ವಿಶ್ವವಿದ್ಯಾಲಯದ ಪ್ರೊ. ರಾಮಸ್ವಾಮಿ ಅವರಿಗೆ ಗುರುವಾರ ರಾಯಚೂರಿನ ಕ್ಯಾಪಸ್‌ನಲ್ಲಿ ಅಧಿಕೃತವಾಗಿ ಹಸ್ತಾಂತರಿದರು.

ಪ್ರತ್ಯೇಕವಾಗಿ ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು, ಆದರೆ ಆಸ್ತಿಗಳ ಹಾಗೂ ದಾಖಲೆಗಳ ಹಸ್ತಾಂತರವಾಗಿರಲಿಲ್ಲ. ಗುರುವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ದಯಾನಂದ ಅವರ ನೇತೃತ್ವದ ಅಧಿಕಾರಿಗಳ ತಂಡ ಹಸ್ತಾಂತರ ಮಾಡಿದರು.

ನೂತನ ರಾಯಚೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸೇರಿದ್ದು, ರಾಯಚೂರು ಜಿಲ್ಲೆಯ 122 ಮತ್ತು ಯಾದಗಿರಿ ಜಿಲ್ಲೆಯ 102 ಸೇರಿ ಒಟ್ಟು 224 ಮಹಾವಿದ್ಯಾಲಯಗಳು ಸೇರ್ಪಡೆಯಾಗಿವೆ. ಈ ಕಾರಣದಿಂದ ನೂತನ ವಿಶ್ವವಿದ್ಯಾಲಯದಲ್ಲಿ 2021-22ನೇ ಸಾಲಿನಿಂದ ಶೈಕ್ಷಣಿಕ ಚಟುವಟಿಕೆಗಳು ಅಧಿಕೃತವಾಗಿ ಶುರುವಾಗಲಿವೆ ಎಂದು ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ತಿಳಿಸಿದರು.

ADVERTISEMENT

ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ಶರಣಬಸಪ್ಪ ಕೋಟಿಪ್ಪಗೋಳ, ಕುಲಸಚಿವ ಮೌಲ್ಯಮಾಪನ ಡಾ.ಸೋನಾರ ನಂದಪ್ಪ, ವಿತ್ತಾಧಿಕಾರಿ ಪ್ರೊ.ಬಿ.ವಿಜಯ ಹಾಗೂ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ರಾಘವೇಂದ್ರ ಎಚ್.ಫತ್ತೇಪುರ, ಪ್ರೊ.ಪಾರ್ವತಿ ಸಿ.ಎಸ್, ಪ್ರೊ.ಪಿ.ಭಾಸ್ಕರ್ , ನುಸ್ರತ್ ಫಾತೀಮಾ, ವಾಸುದೇವ ಜೇವರ್ಗಿ, ಡಾ.ಗುರುರಾಜ ಬಿರದಾರ ಸೇರಿಂದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.