ADVERTISEMENT

ಎನ್‌ಆರ್‌ಐಗಳಿಗೆ ಅವಕಾಶ ನಿರಾಕರಣೆ ಅಸಾಧ್ಯ: ಡಾ.ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:34 IST
Last Updated 27 ಸೆಪ್ಟೆಂಬರ್ 2025, 23:34 IST
ಡಾ.ಶರಣಪ್ರಕಾಶ ಪಾಟೀಲ
ಡಾ.ಶರಣಪ್ರಕಾಶ ಪಾಟೀಲ   

ಸಿಂಧನೂರು (ರಾಯಚೂರು ಜಿಲ್ಲೆ): ‘ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ವಿಶೇಷ ಅನುದಾನ ಸಿಗಬೇಕಾದರೆ ಶೇ 15ರಷ್ಟು ಮೆಡಿಕಲ್ ಸೀಟುಗಳನ್ನು ಎನ್‌ಆರ್‌ಐಗಳಿಗೆ ಕೊಡಬೇಕಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಶನಿವಾರ ಪ್ರತಿಪಾದಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನಿವಾಸಿ ಭಾರತೀಯರಿಗೆ ಮೆಡಿಕಲ್ ಮತ್ತು ಇತರೆ ಕೋರ್ಸ್‌ಗಳ ಪ್ರವೇಶ ನಿರಾಕರಿಸಲಾಗದು. ಎಲ್ಲ ರಾಜ್ಯಗಳಲ್ಲೂ ಅವಕಾಶ ಕೊಡಲಾಗಿದೆ’ ಎಂದರು.

‘ಖಾಸಗಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡುವ ಸ್ಟೈಫಂಡ್‍ನಲ್ಲಿ ಕಡಿತ ಮಾಡಲಾಗುತ್ತಿದೆ’ ಎಂಬ ಆರೋಪ ಕುರಿತು, ‘ಈ ಕುರಿತ ದೂರುಗಳ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ ಎಚ್ಚರಿಕೆ ನೀಡಲಾಗಿದೆ’ ಎಂದರು.

ADVERTISEMENT

‘ಸ್ಟೈಫಂಡ್ ಹಣ ದುರುಪಯೋಗ ಪ್ರಕರಣದಲ್ಲಿ ಅಂಥ ಕಾಲೇಜುಗಳಿಗೆ ಅನುದಾನ ರದ್ದುಪಡಿಸುವಂತೆ ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.